ADVERTISEMENT

ಕಪ್ಪು ಶಿಲೀಂಧ್ರ: 10 ದಿನಗಳಲ್ಲಿ 10 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 22:30 IST
Last Updated 28 ಆಗಸ್ಟ್ 2021, 22:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕಪ್ಪುಶಿಲೀಂಧ್ರಸೋಂಕಿಗೆ ಕಳೆದ 10 ದಿನಗಳಲ್ಲಿ10 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 451ಕ್ಕೆ ಏರಿಕೆ ಕಂಡಿದೆ.

ರಾಜ್ಯದ 27 ಜಿಲ್ಲೆಗಳಲ್ಲಿ ಮರಣ ಪ್ರಕರಣಗಳು ವರದಿಯಾಗಿವೆ. ತಡವಾಗಿ ಆಸ್ಪತ್ರೆಗೆ ದಾಖಲಾತಿ ಸೇರಿದಂತೆ ವಿವಿಧ ಕಾರಣಗಳಿಂದ ಸೋಂಕಿತರಲ್ಲಿ ಕೆಲವರು ಮೃತಪಡುತ್ತಿದ್ದಾರೆ. ಕಳೆದ 10 ದಿನಗಳಲ್ಲಿ ಹೊಸದಾಗಿ ಯಾರಿಗೂ ಸೋಂಕು ತಗುಲಿಲ್ಲ. ಮೊದಲ ಪ್ರಕರಣ ವರದಿಯಾದಾಗಿನಿಂದ ಈವರೆಗೆ ಒಟ್ಟು 3,878 ಮಂದಿ ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾಗಿದ್ದಾರೆ.

ವರದಿಯಾದ ಒಟ್ಟು ಪ್ರಕರಣಗಳಲ್ಲಿ ಶೇ 30ಕ್ಕೂ ಅಧಿಕ ಪ್ರಕರಣಗಳು ಬೆಂಗಳೂರಿನಲ್ಲಿಯೇ ದೃಢಪಟ್ಟಿವೆ. ಈವರೆಗೆ 1,222 ಮಂದಿ ಸೋಂಕಿತರಾಗಿರುವುದು ಖಚಿತಪಟ್ಟಿದೆ. ಅವರಲ್ಲಿ 153 ಮಂದಿ ಸಾವಿಗೀಡಾಗಿದ್ದಾರೆ.

ADVERTISEMENT

ಧಾರವಾಡದಲ್ಲಿ 345, ವಿಜಯಪುರದಲ್ಲಿ 235, ಕಲಬುರ್ಗಿಯಲ್ಲಿ 216, ಬಳ್ಳಾರಿಯಲ್ಲಿ 173, ಚಿತ್ರದುರ್ಗದಲ್ಲಿ 167, ಬೆಳಗಾವಿಯಲ್ಲಿ 159, ರಾಯಚೂರಿನಲ್ಲಿ 142, ಮೈಸೂರಿನಲ್ಲಿ 137, ಬಾಗಲಕೋಟೆಯಲ್ಲಿ 131, ದಾವಣಗೆರೆಯಲ್ಲಿ 124, ಕೋಲಾರದಲ್ಲಿ 114 ಹಾಗೂ ದಕ್ಷಿಣ ಕನ್ನಡದಲ್ಲಿ 105 ಸೋಂಕು ದೃಢ ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ರ ಗಡಿಯೊಳಗೆ ಇದೆ.

ರಾಜ್ಯದ 13 ಜಿಲ್ಲೆಗಳಲ್ಲಿ ಮರಣ ಪ್ರಕರಣಗಳ ಸಂಖ್ಯೆ ಎರಡಂಕಿಯಲ್ಲಿದೆ. ಧಾರವಾಡದಲ್ಲಿ 45, ಬಳ್ಳಾರಿಯಲ್ಲಿ 28, ದಕ್ಷಿಣ ಕನ್ನಡದಲ್ಲಿ 25, ಕಲಬುರ್ಗಿಯಲ್ಲಿ 24, ದಾವಣಗೆರೆ ಹಾಗೂ ಮೈಸೂರಿನಲ್ಲಿ ತಲಾ 20, ಶಿವಮೊಗ್ಗದಲ್ಲಿ 15, ಬಾಗಲಕೋಟೆಯಲ್ಲಿ 13, ರಾಯಚೂರಿನಲ್ಲಿ 12, ಕೋಲಾರ, ಹಾಸನ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ 11 ಹಾಗೂ ಗದಗದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 10ಕ್ಕಿಂತ ಕಡಿಮೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.