ADVERTISEMENT

ಸಂಧ್ಯಾ ಸುರಕ್ಷ: ಮಾಸಾಶನ ₹600 ರಿಂದ ₹1000ಕ್ಕೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 7:51 IST
Last Updated 8 ಫೆಬ್ರುವರಿ 2019, 7:51 IST
   

ಬೆಂಗಳೂರು: ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಕುಡಿಯುವ ನೀರು, ವಯಸ್ಸಾದವರಿಗೆ ಮಾಸಾಶನದ ಮೊತ್ತ ಹೆಚ್ಚಳದಂತಹ ಕೊಡುಗೆಗಳನ್ನು ನೀಡಿದರು.

‘ಜಲಧಾರೆ’ ಯೋಜನೆ:ಮೇಲ್ಮೈ ಜಲಮೂಲಗಳಿಂದ ಕುಡಿಯುವ ನೀರು ಒದಗಿಸುವ ಜಲಧಾರೆ ಯೋಜನೆ ಜಾರಿಯನ್ನು ಘೋಷಿಸಿದರು.

ಮಾಸಾಶನ ಹೆಚ್ಚಳ:65 ವರ್ಷದ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ಪ್ರಾರಂಭಿಸಲಾಗಿದ್ದ ಸಂಧ್ಯಾ ಸುರಕ್ಷಾ ಯೋಜನೆಯಡಿ ನೀಡಲಾಗುತ್ತಿದ್ದ ಮಾಸಾಶನದ ಮೊತ್ತವನ್ನು ₹600ರಿಂದ ₹1000ಕ್ಕೆ ಹೆಚ್ಚಳಿಸಲಾಗಿದೆ.

ADVERTISEMENT

ನಗರಗಳ ಬೆಳವಣಿಗೆಗೆ ಕಡಿವಾಣ:ನಗರಗಳ ಅನಿಯಂತ್ರಿತ ಬೆಳವಣಿಗೆಗೆ ಕಡಿವಾಣ ಹಾಗೂ ಮೂಲ ಸೌಕರ್ಯ ಒದಗಿಸುವ ಬೃಹತ್ ಸವಾಲು ಸರ್ಕಾರದ ಮುಂದಿದೆ ಎಂದು ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.