ADVERTISEMENT

ಎಮ್ಮೆ ಪ್ರದರ್ಶನ ವೇಳೆ ಕಲ್ಲುತೂರಾಟ

ಪೊಲೀಸರಿಂದ ಲಾಠಿ ಪ್ರಹಾರ: ದಿಕ್ಕಾಪಾಲಾಗಿ ಓಡಿದ ಜನ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 20:19 IST
Last Updated 8 ನವೆಂಬರ್ 2018, 20:19 IST
ಬೆಳಗಾವಿಯಲ್ಲಿ ನಡೆದ ಎಮ್ಮೆಗಳ ಪ್ರದರ್ಶನದ ವೇಳೆ ಎರಡು ಗುಂಪುಗಳು ಬಾವುಟ ಹಾರಿಸುತ್ತಿದ್ದ ದೃಶ್ಯ
ಬೆಳಗಾವಿಯಲ್ಲಿ ನಡೆದ ಎಮ್ಮೆಗಳ ಪ್ರದರ್ಶನದ ವೇಳೆ ಎರಡು ಗುಂಪುಗಳು ಬಾವುಟ ಹಾರಿಸುತ್ತಿದ್ದ ದೃಶ್ಯ   

ಬೆಳಗಾವಿ: ಇಲ್ಲಿನ ಸರ್ದಾರ್‌ ಪ್ರೌಢಶಾಲೆ ಮೈದಾನದಲ್ಲಿ ದೀಪಾವಳಿ (ಬಲಿಪಾಢ್ಯಮಿ) ಅಂಗವಾಗಿ ಭಾನುವಾರ ಆಯೋಜಿಸಲಾಗಿದ್ದ ಎಮ್ಮೆಗಳ ಪ್ರದರ್ಶನದ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ, ಕಲ್ಲು ತೂರಾಟ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆಯಲ್ಲಿ ಹಲವರು ಗಾಯಗೊಂಡರು.

ಬಲಿಪಾಢ್ಯಮಿಯಂದು ಎಮ್ಮೆಗಳ ಮೆರವಣಿಗೆ ಸಾಮಾನ್ಯ.ಜನರು ಎಮ್ಮೆ ಸಿಂಗರಿಸಿ ಸರ್ದಾರ್ ಮೈದಾನಕ್ಕೆ ಕರೆ ತಂದಿದ್ದರು. ಇದನ್ನು ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಯುವಕರು ಕನ್ನಡ ಧ್ವಜ ಹಾಗೂ ಭಗವಾಧ್ವಜ ಹಾರಿಸುತ್ತಿದ್ದರು. ಈ ವಿಚಾರವಾಗಿ ತಳ್ಳಾಟ, ನೂಕಾಟ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT