ADVERTISEMENT

ಶಾ ನಿರ್ಬಂಧಕ್ಕೆ ಸಲಹೆ: ಅಮೆರಿಕಕ್ಕೆ ಭಾರತ ತರಾಟೆ

ಪಿಟಿಐ
Published 11 ಡಿಸೆಂಬರ್ 2019, 2:02 IST
Last Updated 11 ಡಿಸೆಂಬರ್ 2019, 2:02 IST
   
ನವದೆಹಲಿ: ಪೌರತ್ವ (ತಿದ್ದುಪಡಿ) ಮಸೂದೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವನ್ನು (ಯುಎಸ್‌ಸಿಐಆರ್‌ಎಫ್‌) ಭಾರತವು ತರಾಟೆಗೆ ತೆಗೆದುಕೊಂಡಿದೆ. ಮಸೂದೆಯ ವಿಚಾರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಯಾವುದೇ ಹಕ್ಕು ಇಲ್ಲದ ಸಮಿತಿಯೊಂದು ತನ್ನ ಪೂರ್ವಗ್ರಹಗಳನ್ನೇ ಆಧಾರವಾಗಿ ಇರಿಸಿಕೊಂಡು ಹೇಳಿಕೆ ನೀಡಿರುವುದು ವಿಷಾದನೀಯ ಎಂದು ಭಾರತ ಸರ್ಕಾರ ಹೇಳಿದೆ.

ಮಸೂದೆಯನ್ನು ಯುಎಸ್‌ಸಿಐಆರ್‌ಎಫ್‌ ಕಟುವಾದ ಪದಗಳಲ್ಲಿ ಖಂಡಿಸಿದೆ. ಮಸೂದೆಯು ಕಾನೂನಾಗಿ ಪರಿವರ್ತನೆಯಾದರೆ, ಮಸೂದೆ ಮಂಡಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಇತರ ಪ್ರಮುಖ ನಾಯಕರ ಮೇಲೆ ನಿರ್ಬಂಧ ಹೇರುವ ವಿಚಾರವನ್ನು ಪರಿಶೀಲಿಸಬೇಕು ಎಂದು ಅಮೆರಿಕ ಸರ್ಕಾರವನ್ನು ಕೋರಿದೆ.

ಯುಎಸ್‌ಸಿಐಆರ್‌ಎಫ್‌ ಹೇಳಿದ್ದೇನು?

ADVERTISEMENT

ಪೌರತ್ವ (ತಿದ್ದುಪಡಿ) ಮಸೂದೆಯು ತಪ್ಪು ಹಾದಿಯಲ್ಲಿನ ಅಪಾಯಕಾರಿ ಬೆಳವಣಿಗೆ. ಭಾರತವು ಹೊಂದಿರುವ ಜಾತ್ಯತೀತ ಬಹುತ್ವದ ಶ್ರೀಮಂತ ಇತಿಹಾಸಕ್ಕೆ ವಿರುದ್ಧವಾಗಿದೆ. ಧಾರ್ಮಿಕ ಪಕ್ಷಪಾತವಿಲ್ಲದೆ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಭಾರತದ ಸಂವಿಧಾನವು ನೀಡಿರುವ ಖಾತರಿಯನ್ನೂ ಇದು ಅಲ್ಲಗಳೆಯುತ್ತದೆ.

ಪ್ರತಿಗಾಮಿ- ಪಾಕ್‌ ಟೀಕೆ: ‘ಪ್ರತಿಗಾಮಿ ಮತ್ತು ತಾರತಮ್ಯ ತೋರುವ ಪೌರತ್ವ (ತಿದ್ದುಪಡಿ) ಮಸೂದೆಯು ಧರ್ಮದ ಆಧಾರದಲ್ಲಿ ನೆರೆ ದೇಶಗಳ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವ ದುರುದ್ದೇಶ ಹೊಂದಿದೆ’ ಎಂದು ಪಾಕಿಸ್ತಾನ ಪ್ರತಿಕ್ರಿಯೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.