ADVERTISEMENT

ಚಾವಣಿ ಏರಿದ ಕಾರು!

ಮನೆ ದೇವರ ಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕದ ಛಾಯೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 20:30 IST
Last Updated 21 ನವೆಂಬರ್ 2018, 20:30 IST
ಕಾರು ಮನೆಯ ಚಾವಣಿ ಮೇಲೆ ನಿಂತಿರುವುದು
ಕಾರು ಮನೆಯ ಚಾವಣಿ ಮೇಲೆ ನಿಂತಿರುವುದು   

ಚಾಮರಾಜನಗರ: ಇಲ್ಲಿಗೆ ಸಮೀಪದ ಜಾಲಹುಂಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಹಿಮ್ಮುಖವಾಗಿ ರಭಸದಿಂದ ಚಲಿಸಿದ ಕಾರು ಡಿಕ್ಕಿ ಹೊಡೆದಿದ್ದರಿಂದ ಮಾದಶೆಟ್ಟಿ ಎಂಬುವರ ಪತ್ನಿ ಲಕ್ಷ್ಮಮ್ಮ (50) ಮೃತಪಟ್ಟಿದ್ದಾರೆ.

ಕಾರು ಎಷ್ಟು ವೇಗವಾಗಿ ಹಿಮ್ಮುಖವಾಗಿ ಚಲಿಸಿದೆ ಎಂದರೆ, ಕಾರಿನ ಹಿಂಭಾಗ ಚಾವಣಿಯ ಮೇಲೆ ಏರಿತ್ತು!

ಘಟನೆ ವಿವರ: ಲಕ್ಷ್ಮಮ್ಮ ಅವರ ಕುಟುಂಬದವರು ಮನೆ ದೇವರ ಹಬ್ಬದ ಸಡಗರದಲ್ಲಿದ್ದರು. ಮಂಗಳವಾರ ಸಂಜೆ ಹಬ್ಬ ಮುಗಿಸಿಕೊಂಡು, ರಾತ್ರಿ 9.15 ಗಂಟೆಗೆ ಮನೆಯ ಜಗಲಿಯಲ್ಲಿ ಮಾತನಾಡುತ್ತಾ ಕುಳಿತಿದ್ದರು. ಈ ಸಂದರ್ಭದಲ್ಲಿ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಫೋರ್ಡ್‌ ಐಕಾನ್‌ ಕಾರನ್ನು ರಾಜಣ್ಣ ಎಂಬುವರು ಹಿಂದಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ.

ADVERTISEMENT

ರಾಜಣ್ಣ ಅವರಿಗೆ ಕಾರು ಚಾಲನೆಯ ಅನುಭವವಿಲ್ಲ ಎಂದು ಹೇಳಲಾಗಿದೆ. ಕ್ಲಚ್‌ ಬದಲಿಗೆ ಎಕ್ಸಲರೇಟರ್‌ ಪೆಡಲ್‌ ಅದುಮಿದ್ದರಿಂದ ಈ ಅವಘಡ ಸಂಭವಿಸಿದೆ. ಘಟನೆ ನಡೆದ ತಕ್ಷಣ ಕಾರು ಬಿಟ್ಟು ಪರಾರಿಯಾಗಿದ್ದಾರೆ ಎಂದು ಸಂಚಾರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಕೆ.ದೀಪಕ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.