ADVERTISEMENT

ನೋಂದಣಿಗೆ ಡಿಡಿ ಸ್ವೀಕೃತಿ ನಿಷೇಧ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 16:53 IST
Last Updated 5 ಜೂನ್ 2021, 16:53 IST

ಬೆಂಗಳೂರು: ಉಪ ನೋಂದಣಿ ಕಚೇರಿಗಳಲ್ಲಿ ಡಿಮಾಂಡ್‌ ಡ್ರಾಫ್ಟ್‌ (ಡಿ.ಡಿ) ಮೂಲಕ ಶುಲ್ಕ ಸ್ವೀಕೃತಿಯನ್ನು ನಿಷೇಧಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಸರ್ಕಾರದ ಹಣ ಖಾಸಗಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಆಗುತ್ತಿರುವ ಕಾರಣದಿಂದ ನಗದು ಮತ್ತು ಡಿ.ಡಿ ಮೂಲಕ ಶುಲ್ಕ ಪಡೆಯುವುದನ್ನು ನಿಷೇಧಿಸಲಾಗಿದೆ. ಬ್ಯಾಂಕ್‌ ಮೂಲಕ ಅಥವಾ ಡಿಜಿಟಲ್‌ ವರ್ಗಾವಣೆ ಮೂಲಕ ಹಣ ಪಾವತಿ ಕಡ್ಡಾಯಗೊಳಿಸಲಾಗಿದೆ. ನಗದು ಅಥವಾ ಡಿ.ಡಿ ಪಡೆಯುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.

ಖಜಾನೆ ತಂತ್ರಾಂಶ ಮತ್ತು ನೋಂದಣಿ ಇಲಾಖೆಯ ಕಾವೇರಿ ತಂತ್ರಾಂಶಗಳನ್ನು ಜೋಡಣೆ ಮಾಡುವವರೆಗೂ ಹಣ ಪಾವತಿಯನ್ನು ಖಚಿತಪಡಿಸಿಕೊಂಡು, ಉಪ ನೋಂದಣಾಧಿಕಾರಿ ಪ್ರಮಾಣೀಕರಿಸಿದ ಬಳಿಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.