ಬೆಂಗಳೂರು: ಜಾತಿ ಗಣತಿ ವಿಚಾರಗಳ ಕುರಿತು ಮುಸ್ಲಿಂ ಮುಖಂಡರು, ಧಾರ್ಮಿಕ ಗುರುಗಳ ಸಭೆ ಬುಧವಾರ ನಡೆಯಿತು.
ವಕ್ಫ್ ವಿಚಾರದಲ್ಲಿ ಸುಪ್ರೀಂಕೋರ್ಟ್ ಬೆಳವಣಿಗೆ, ಜಾತಿ ಗಣತಿ ವಿಚಾರದಲ್ಲಿ ಸಂಪುಟ ಸಭೆಯ ತೀರ್ಮಾನ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲು ಸಭೆ ನಿರ್ಧರಿಸಿತು.
ಧರ್ಮ ಗುರುಗಳಾದ ಮೌಲಾನಾ ಅಮೀರ್ ಎ ಶೆರಿಯತ್, ಮೌಲಾನಾ ಮಕ್ಸುದ್ ಇಮ್ರಾನ್, ವಕ್ಫ್ ಸಚಿವ ಜಮೀರ್ ಅಹಮದ್ ಖಾನ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮಾಜಿ ಸಚಿವ ರೋಷನ್ ಬೇಗ್, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಬಾಷಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.