ADVERTISEMENT

ಕೇಂದ್ರ–ರಾಜ್ಯ ಹಗ್ಗಜಗ್ಗಾಟ l ತೆವಳುತ್ತಿದೆ ರಾಜ್ಯದ ರೈಲು ಯೋಜನೆ

ಭೂಸ್ವಾಧೀನದ ಕಗ್ಗಂಟು l 5 ಯೋಜನೆಗಳು 10 ವರ್ಷ ವಿಳಂಬ

ಮಂಜುನಾಥ್ ಹೆಬ್ಬಾರ್‌
Published 29 ಜನವರಿ 2023, 19:32 IST
Last Updated 29 ಜನವರಿ 2023, 19:32 IST
   

ನವದೆಹಲಿ: ಯೋಜನಾ ಮೊತ್ತ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ನಡುವೆ ಹಗ್ಗ ಜಗ್ಗಾಟ, ಭೂಸ್ವಾಧೀನ ಸಮಸ್ಯೆ ಮತ್ತಿತರ ಕಾರಣಗಳಿಂದಾಗಿ ಕರ್ನಾಟಕದ ರೈಲು ಯೋಜನೆಗಳು ತೆವಳುತ್ತಾ ಸಾಗಿವೆ.

ಸುಮಾರು ₹10 ಸಾವಿರ ಕೋಟಿ ಮೊತ್ತದಲ್ಲಿ ರಾಜ್ಯದಲ್ಲಿ 9 ಹೊಸ ರೈಲು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೆಲವು ಯೋಜನೆಗಳ ಕಾಮಗಾರಿ ನಿಂತಲ್ಲೇ ನಿಂತಿದೆ. ಬಹುತೇಕ ಯೋಜನೆಗಳಿಗೆ ಭೂಸ್ವಾಧೀನದ ಗ್ರಹಣ ಎದುರಾಗಿದೆ. ಇದರಿಂದಾಗಿ, ಹಳಿಗಳಲ್ಲಿ ರೈಲುಗಳ ಓಡಾಟಕ್ಕೆ ಕಾಲ ಕೂಡಿಬಂದಿಲ್ಲ. ರಾಜ್ಯದ ಐದು ಯೋಜನೆಗಳು 10 ವರ್ಷಗಳಷ್ಟು ವಿಳಂಬವಾಗಿದೆ ಎಂದು ಕೇಂದ್ರ ಸರ್ಕಾರ ಪಟ್ಟಿ ಮಾಡಿದೆ.

ದಶಕ ವಿಳಂಬ: ಬಾಗಲಕೋಟೆ–ಕುಡಚಿ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು 2010–11ರಲ್ಲಿ. ಈ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಲಾ ಶೇ 50 ಮೊತ್ತ ಭರಿಸಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಯೋಜನೆಗೆ ಬೇಕಿರುವ ಭೂಮಿಯನ್ನು ಕರ್ನಾಟಕ ಸರ್ಕಾರ ಉಚಿತವಾಗಿ ನೀಡಬೇಕು ಎಂದು ರೈಲ್ವೆ ಇಲಾಖೆ ಷರತ್ತು ವಿಧಿಸಿತ್ತು. 142 ಕಿ.ಮೀ. ಉದ್ದದ ಈ ಮಾರ್ಗದ ಆರಂಭಿಕ ಯೋಜನಾ ಮೊತ್ತ ₹816 ಕೋಟಿ ಆಗಿತ್ತು. ಅದು ₹1,530 ಕೋಟಿಗೆ ಏರಲಿದೆ ಎಂದು ಕರ್ನಾಟಕ ಸರ್ಕಾರ ಲೆಕ್ಕ ಹಾಕಿದೆ. ಈ ಪರಿಷ್ಕೃತ ಅಂದಾಜು ಮೊತ್ತಕ್ಕೆ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿ ಎರಡು ಸಲ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದೆ. ಪರಿಷ್ಕೃತ ಯೋಜನಾ ಮೊತ್ತ ಹಂಚಿಕೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಮತಕ್ಕೆ ಬಂದಿಲ್ಲ. ಈ ಮಾರ್ಗ 2016ರಲ್ಲಿ ಕಾರ್ಯಾರಂಭ ಮಾಡಬೇಕಿತ್ತು. ಈ ಕಾಮಗಾರಿಗೆ ಈವರೆಗೆ ಯೋಜನಾ ಮೊತ್ತದ ಶೇ 25ರಷ್ಟು ವೆಚ್ಚ ಮಾಡಲಾಗಿದ್ದು, ಭೌತಿಕ ಪ್ರಗತಿ ಶೇ 32ರಷ್ಟು ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕಾಮಗಾರಿ 2026ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಬಹುದು ಎಂದು ರೈಲ್ವೆ ಇಲಾಖೆ ಅಂದಾಜಿಸಿದೆ.

ADVERTISEMENT

ಹಾಸನಕ್ಕೆ ಬರದ ರೈಲು: ಮಲೆನಾಡು ಭಾಗದ ಜನರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಕಡೂರು–ಚಿಕ್ಕಮಗಳೂರು–ಸಕಲೇಶಪುರ ಬ್ರಾಡ್‌ಗೇಜ್‌ ರೈಲು ಮಾರ್ಗ 2017ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳಬೇಕಿತ್ತು. ಕಾಮಗಾರಿಯನ್ನು 2026ರ ಡಿಸೆಂಬರ್‌ಗೆ ಮುಗಿಸುವ ಗಡುವನ್ನು ವಿಧಿಸಲಾಗಿದೆ. ಮಾರ್ಗ ನಿರ್ಮಾಣಕ್ಕೆ ರಾಜ್ಯದ ಪಾಲಿನ ಬಾಕಿ ಮೊತ್ತವಾದ ₹67.68 ಕೋಟಿಯನ್ನೂ ಕರ್ನಾಟಕ ಸರ್ಕಾರ ಠೇವಣಿ ಇಟ್ಟಿಲ್ಲ. ಈ ಸಂಬಂಧ ಕರ್ನಾಟಕ ಸರ್ಕಾರಕ್ಕೆ ನೆನಪೋಲೆ ಬರೆದಿದ್ದ ಕೇಂದ್ರ ಸರ್ಕಾರ, ಈ ವಿಷಯಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಮಾಡಬೇಕು ಎಂದು ಸೂಚಿಸಿತ್ತು. ಈ ಯೋಜನೆಗೆ ಬೇಕಿರುವ ಅರಣ್ಯ ಭೂಮಿ ಹಸ್ತಾಂತರವೇ ದೊಡ್ಡ ಸಮಸ್ಯೆ.

ಕಡೂರು-ಚಿಕ್ಕಮಗಳೂರು-ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗದ ಉದ್ದ 93 ಕಿ.ಮೀ.ಗಳು. 1996-97ರಲ್ಲಿ ಈ ಯೋಜನೆಯ ಅಂದಾಜು ವೆಚ್ಚ ₹157 ಕೋಟಿ ಆಗಿತ್ತು. ಕಡೂರು-ಚಿಕ್ಕಮಗಳೂರು ಮಾರ್ಗದ 45 ಕಿ.ಮೀ. ಕಾಮಗಾರಿ 1999-2000ರಲ್ಲಿ ಆರಂಭವಾಗಿತ್ತು. ಭೂಸ್ವಾಧೀನ ಸಮಸ್ಯೆ ಹಾಗೂ ಅನುದಾನ ಕೊರತೆಯಿಂದ 2010ರವರೆಗೂ ಕಾಮಗಾರಿ ಕುಂಟುತ್ತಲೇ ಸಾಗಿತ್ತು. ಯೋಜನೆ ಮೊತ್ತದಲ್ಲಿ ತಲಾ ಶೇ 50ರಷ್ಟು ಭರಿಸಲು ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರ 2010ರಲ್ಲಿ ಒಪ್ಪಂದ ಮಾಡಿಕೊಂಡವು. ನಂತರ ಕಾಮಗಾರಿಗೆ ವೇಗ ದೊರಕಿತು. ಕಡೂರು– ಚಿಕ್ಕಮಗಳೂರು ಮಾರ್ಗ 2013ರ ನವೆಂಬರ್‌ನಲ್ಲಿ ಪೂರ್ಣ
ಗೊಂಡು ಕಾರ್ಯಾರಂಭ ಮಾಡಿತು.

ಚಿಕ್ಕಮಗಳೂರು– ಬೇಲೂರು ಮಾರ್ಗವನ್ನು (22 ಕಿ.ಮೀ.) ಇ‍ಪಿಸಿ ಟೆಂಡರ್‌ ಪ್ರಕ್ರಿಯೆ ಮೂಲಕ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಹಾಸನ– ಬೇಲೂರು ಹೊಸ ಮಾರ್ಗ ನಿರ್ಮಾಣವಾಗುತ್ತಿರುವುದರಿಂದ, ಬೇಲೂರು– ಸಕಲೇಶಪುರ ಮಾರ್ಗ ನಿರ್ಮಾಣದ ಪ್ರಸ್ತಾವವನ್ನು 2019ರಲ್ಲಿ ಕೈಬಿಡಲಾಗಿದೆ’ ಎಂದು ಕರ್ನಾಟಕ ಸರ್ಕಾರ ಹೇಳಿಕೊಂಡಿದೆ.

ಬಯಲುಸೀಮೆಯಲ್ಲಿ ಆಮೆಗತಿ: 213 ಕಿ.ಮೀ. ಉದ್ದದ ರಾಯದುರ್ಗ–ಕಲ್ಯಾಣದುರ್ಗ– ತುಮಕೂರು ರೈಲು ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ನೀಡಿ 15 ವರ್ಷಗಳ (2007–2008) ಮೇಲಾಗಿದೆ.

ಮೂವರು ಕಾರ್ಯದರ್ಶಿಗಳು ಸಭೆಯಲ್ಲಿ ವಿಷಯ ಮಂಡನೆ ಮಾಡಿದರು. ಎಂಟು ವರ್ಷಗಳ ಅವಧಿಯಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಮೋದಿ ನೇತೃತ್ವದ ಸರ್ಕಾರದ ಒಟ್ಟಾರೆ ಕೆಲಸಗಳನ್ನು ಒಳಗೊಂಡ ವಿಷಯವನ್ನು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಮಂಡಿಸಿದರು. ಈ ವಿಸ್ತೃತ ವಿಷಯ ಮಂಡನೆಯು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಒತ್ತು ನೀಡಿತು. ಹಲವು ಐಐಟಿ, ಐಐಎಂ ಹಾಗೂ ಐಐಎಸ್‌ಸಿ ಕೇಂದ್ರಗಳನ್ನು ದೇಶದ ವಿವಿಧೆಡೆ ಸ್ಥಾಪಿಸಲಾಗಿದೆ ಎಂದು ಗೌಬಾ ಹೇಳಿದರು.

ಪ್ರಾಥಮಿಕ, ಪ್ರೌಢ, ಉನ್ನತ ಶಿಕ್ಷಣ ಸೇರಿದಂತೆ ಎಲ್ಲ ವಿಭಾಗದಲ್ಲಿಯೂ ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಳವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚಳವಾಗಿದ್ದು, ಮೂಲಸೌಕರ್ಯಗಳು ಅಭಿವೃದ್ಧಿಯಾಗಿವೆ ಎಂದು ತಿಳಿಸಿದರು.

ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ಕಾರ್ಯದರ್ಶಿ ಅನುರಾಗ್ ಜೈನ್ ಅವರು ತಮ್ಮ ವಿಷಯ ಮಂಡನೆ ವೇಳೆ, ಸರ್ಕಾರ ಆರಂಭಿಸಿರುವ ವಿವಿಧ ಯೋಜನೆಗಳ ಮೇಲೆ ಬೆಳಕು ಚೆಲ್ಲಿದರು. ಕಾಮಗಾರಿ ಪೂರ್ಣಗೊಂಡಿರುವ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ಸ್ಥಿತಿಗತಿಯ ಮಾಹಿತಿಯನ್ನು ಅವರು ಒದಗಿಸಿದರು.

ಕೇಂದ್ರ ಸರ್ಕಾರದ ಕೆಲಸಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಹೇಗೆ ಪ್ರಚುರಪಡಿಸಬಹುದು ಎಂಬುದನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.