ADVERTISEMENT

ಮೇಕೆದಾಟು ಪಾದಯಾತ್ರೆ ಕೈಬಿಡಿ: ವಿರೋಧ ಪಕ್ಷದ ನಾಯಕರಿಗೆ ಮುಖ್ಯಮಂತ್ರಿ ಮನವಿ 

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 8:04 IST
Last Updated 13 ಜನವರಿ 2022, 8:04 IST
   

ಬೆಂಗಳೂರು:'ಮೇಕೆದಾಟು ಪಾದಯಾತ್ರೆಯನ್ನು ಕೈಬಿಡಬೇಕು' ಎಂದು ವಿಧಾನಸಭೆಯವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಮಾಧ್ಯಮ ಪ್ರಕಟಣೆಯಲ್ಲಿ ಈ ಮನವಿ ಮಾಡಿರುವ ಅವರು, 'ನಾವೆಲ್ಲರೂ ಕೊರೊನಾವನ್ನು ಎದುರಿಸಿ ಮುಂಬರುವ ದಿನಗಳಲ್ಲಿ ಒಂದಾಗಿ ಮೇಕೆದಾಟು ಯೋಜನೆ ಅನುಷ್ಠಾನದ ಕುರಿತು ಕ್ರಮ ಕೈಗೊಳ್ಳೋಣ' ಎಂದೂ ಹೇಳಿದ್ದಾರೆ.

'ಮೇಕೆದಾಟು ಯೋಜನೆಯ ಬಗ್ಗೆ ನಿಮ್ಮೆಲ್ಲರ ವಿಶ್ವಾಸದೊಂದಿಗೆ ಅನುಷ್ಠಾನಕ್ಕಾಗಿ ಬೇಕಾಗಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸಿದ್ದನಿದ್ದೇನೆ' ಎಂದೂ ಅವರು ಭರವಸೆ ನೀಡಿದ್ದಾರೆ.

ADVERTISEMENT

'ಕೊರೊನಾಮಹಾಮಾರಿಯ ಮೂರನೇ ಅಲೆಯುತೀವ್ರವಾಗಿ ಅಪ್ಪಳಿಸಿರುವುದರಿಂದ ಜನಜೀವನ,ವಿಶೇಷವಾಗಿ ಮಕ್ಕಳ ಮೇಲೆ ದುಷ್ಪರಿಣಾಮ ಬೀರಿದೆ. ಈ ಸಂದರ್ಭದಲ್ಲಿ ಹೆಚ್ಚು ಜನರನ್ನು ಸೇರಿಸಿ ಪಾದಯಾತ್ರೆ ಮುಂತಾದವುಗಳನ್ನು ಮಾಡುವುದು ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸರಿ ಇರುವುದಿಲ್ಲ. ಈಗಾಗಲೇ ಹೈಕೋರ್ಟ್ ಕೂಡ ಈ ಬಗ್ಗೆ ತೀವ್ರವಾದ ಅಂಥ ಅಭಿಪ್ರಾಯ ನೀಡಿದೆ. ಇದು ಜನಾಭಿಪ್ರಾಯ ಕೂಡ ಆಗಿದೆ' ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.