
ಬೆಂಗಳೂರು: ನಾಯಕತ್ವ ಮತ್ತು ಅಧಿಕಾರ ಹಂಚಿಕೆ ವಿಷಯದಲ್ಲಿ ವಿರುದ್ಧ ಧ್ರುವಗಳಂತೆ ಕಾಣಿಸಿಕೊಳ್ಳಲಾರಂಭಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಉಪಹಾರ’ದ ನೆವದಲ್ಲಿ ಒಟ್ಟಿಗೆ ಸೇರಲಿದ್ದಾರೆ.
ಶನಿವಾರ ಬೆಳಗಿನ ಉಪಹಾರಕ್ಕೆ ತಮ್ಮ ಮನೆಗೆ ಬರುವಂತೆ ಸಿದ್ದರಾಮಯ್ಯ ಅವರು ಶಿವಕುಮಾರ್‌ಗೆ ಆಮಂತ್ರಣ ನೀಡಿದ್ದಾರೆ. ವರಿಷ್ಠರ ಸೂಚನೆ ಅನ್ವಯ ಈ ಉಪಹಾರಕೂಟ ನಿಗದಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಸರ್ಕಾರ ಎರಡೂವರೆ ವರ್ಷ ಪೂರೈಸಿದ ಬಳಿಕ, ಅಧಿಕಾರ ಹಂಚಿಕೆ ವಿಷಯ ವಿವಾದದ ಸ್ವರೂಪ ಪಡೆದುಕೊಂಡಿತ್ತು. ನಾಯಕರ ಪರ ಆಯಾ ಸಮುದಾಯದ ನಾಯಕರು, ಸ್ವಾಮೀಜಿಗಳು ಬಹಿರಂಗ ಹೇಳಿಕೆ ನೀಡಿದ್ದರಿಂದಾಗಿ, ಕುರ್ಚಿ ಕುಸ್ತಿ ಬೀದಿಗೆ ಬಂದಿತ್ತು.
ಇಬ್ಬರು ನಾಯಕರ ಮಧ್ಯೆ ‘ಕೊಟ್ಟ ಮಾತು’ ಕುರಿತ ‘ಎಕ್ಸ್’ ವಾಗ್ವಾದವೂ ಶುರುವಾಗಿತ್ತು. ಏತನ್ಮಧ್ಯೆ, ಶಿವಕುಮಾರ್ ಅವರು ಶುಕ್ರವಾರವೇ ದೆಹಲಿಗೆ ತೆರಳಲಿದ್ದಾರೆ ಎಂಬ ವದಂತಿ ಹರಡಿತ್ತು. ದೆಹಲಿ ಯಾತ್ರೆ ರದ್ದಾಗಿದ್ದು, ಉಪಹಾರಕ್ಕೆ ಮುಹೂರ್ತ ನಿಗದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.