ADVERTISEMENT

ಚಿಕ್ಕಮಗಳೂರು: ಇಳೆಗೆ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 18:22 IST
Last Updated 6 ಫೆಬ್ರುವರಿ 2019, 18:22 IST
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದ ರಸ್ತೆಯಲ್ಲಿ ಬುಧವಾರ ಸಂಜೆ ಮಳೆಯಲ್ಲೇ ವಾಹನ ಸಂಚಾರ ಹಾಗೂ ಪ್ರಯಾಣಿಕರು ಸಾಗುತ್ತಿದ್ದುದು ಕಂಡುಬಂತು.
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದ ರಸ್ತೆಯಲ್ಲಿ ಬುಧವಾರ ಸಂಜೆ ಮಳೆಯಲ್ಲೇ ವಾಹನ ಸಂಚಾರ ಹಾಗೂ ಪ್ರಯಾಣಿಕರು ಸಾಗುತ್ತಿದ್ದುದು ಕಂಡುಬಂತು.   

ಚಿಕ್ಕಮಗಳೂರು:ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಸಂಜೆ ಗುಡುಗುಸಹಿತ ಮಳೆ ಸುರಿಯಿತು.

ಸಂಜೆ5ರಿಂದ6ಗಂಟೆವರೆಗೂ ಮಳೆಯಾಯಿತು.ತುಂತುರುವಾಗಿ ಆರಂಭವಾದ ನಂತರ ಜೋರಾಯಿತು.ಬಿಸಿಲಿನಿಂದ ಬಸವಳಿದಿದ್ದ ಇಳೆ ಕೊಂಚ ತಂಪಾಯಿತು.

ಅಮೃತ್‌ ಯೋಜನೆ ಕಾಮಗಾರಿಗೆ ನಗರದ ವಿವಿಧೆಡೆಗಳಲ್ಲಿ ರಸ್ತೆ ಅಗೆದಿರುವ ಗುಂಡಿಗಳಲ್ಲಿ ಕೊಂಚ ನೀರು ತುಂಬಿಕೊಂಡಿತ್ತು. ಕೆಸರಿನಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳ ಸಂಚಾರಕ್ಕೆ ತಾಪತ್ರಯವಾಯಿತು.ತಳ್ಳುಗಾಡಿ ವ್ಯಾಪಾರಿಗಳು, ರಸ್ತೆ ಬದಿ ವ್ಯಾಪಾರಿಗಳಿಗೆ ತೊಂದರೆಯಾಯಿತು.

ADVERTISEMENT

ಮೂಡಿಗೆರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ಒಂದು ತಾಸಿಗೂ ಅಧಿಕ ಕಾಲ ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.