ADVERTISEMENT

ಚಿಂಚೋಳಿ ಬಸ್ ಅಪಘಾತ: 25 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 6:01 IST
Last Updated 9 ಫೆಬ್ರುವರಿ 2020, 6:01 IST
   

ಚಿಂಚೋಳಿ:ಇಲ್ಲಿನ ಚಿಂಚೋಳಿ ಸುಗರ್ ಮಿಲ್ ಆ್ಯಂಡ್ ಬಯೋ ಇಂಡಸ್ಟ್ರೀಸ್ ಸಮೀಪ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮರಕ್ಕೆ ಗುದ್ದಿದ್ದರಿಂದ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

ಘಟನೆಯಲ್ಲಿ ಅನಂತಮ್ಮ ಮಲ್ಲಪ್ಪ (65), ಮಲ್ಲಪ್ಪ(70) ಸ್ಥಿತಿ ಗಂಬೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ 6 ಜನ ಗಾಯಾಳುಗಳನ್ನು ಕಲಬುರ್ಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಘಟನೆಯಲ್ಲಿ ಮೂವರಿಗೆ ಕೈ ಮುರಿದಿವೆ. ಎಲ್ಲಾ ಗಾಯಾಳುಗಳನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಸಬ್ ಇನಸ್ಪೆಕ್ಟರ್ ರಾಜಶೇಖರ ರಾಠೋಡ. ಮುಖಂಡರಾದ ಅಶೋಕ ಚವ್ಹಾಣ. ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ ಮೊದಲಾದವರು ಭೇಟಿ ನೀಡಿದರು. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಬಸ್ ಅಸಮರ್ಪಕ‌ನಿರ್ಹವಣೆ ಆರೋಪ: ಭಾನುವಾರ ಬೆಳಿಗ್ಗೆ ಇಲ್ಲಿನ ಸುಗರ್ ಫ್ಯಾಕ್ಟರಿ ಬಳಿ ಸಂಭವಿಸಿದ ಬಸ್ ಅಪಘಡಕ್ಕೆ ಬಸ್ ಅಸಮರ್ಪಕ ನಿರ್ವಹಣೆ ಕಾರಣ ಎಂದು ಪ್ರಯಾಣಿಕರು ದೂರಿದ್ದಾರೆ.

ಬಸ್ ಡೀಪೊದಿಂದ ಬೆಳಿಗ್ಗೆ 8.ಗಂಟೆಗೆ ಬಸ್ ಹೊರಟಿದೆ. ನಿಲ್ದಾಣದಿಂದ ಬಿಟ್ಟ 3 ಕಿ.ಮೀ ಅಂತರದಲ್ಲಿಯೇ ಅವಘಡ ಸಂಭವಿಸಿದೆ. ಡೀಪೊದಲ್ಲಿ ಸರಿಯಾಗಿ ಚೆಕ್ ಮಾಡದೇ ಮೆಕಾನಿಕ್‌ಗಳು ಬಸ್ ಕಳುಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸ್ಟೇಯರಿಂಗ್ ತುಂಡಾದ್ದರಿಂದ ಈ ಅಪಘಾತ ಸಂಭವಿಸಿದೆ.‌ ಚಾಲಕ ಸಹಿತ 21 ಜನ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.