ADVERTISEMENT

ಭೂ ಒತ್ತುವರಿ ಆಡಿಟಿಂಗ್‌ಗೆ ಸಿ.ಎಂ ಸೂಚನೆ

ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಪತ್ರದ ಆಧಾರದಲ್ಲಿ ಕ್ರಮ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2023, 17:01 IST
Last Updated 19 ಸೆಪ್ಟೆಂಬರ್ 2023, 17:01 IST
siddaramaiah
siddaramaiah   

ಬೆಂಗಳೂರು: ಬೆಂಗಳೂರು ಹಾಗೂ ಬೆಂಗಳೂರಿನಿಂದ 100 ಕಿ.ಮೀ ವ್ಯಾಪ್ತಿಯ ಒಳಗಿನ ರೆಸಾರ್ಟ್‌ ಮತ್ತು ಹೋಂಸ್ಟೇಗಳ  ಒತ್ತುವರಿ ಕುರಿತು ಭೂ ಆಡಿಟಿಂಗ್ ಮಾಡಲು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಅವರು ದಿನಕ್ಕಾಗಿ ಎರುಖು ಆಗಪರಿಚಯವನ್ನು ನಿಮಗೆ ಹಂಚಿದರೆ, ಸರಿ ಅವರೇ? Siddharamayya avaru dinakkAagi erukhu Agaparichchayavanu nimagE hanchidare, sari avarE?ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಅವರು ಈಚೆಗೆ ಮುಖ್ಯಮಂತ್ರಿಗೆ ಪತ್ರ ಬರೆದು, ಬೆಂಗಳೂರು ಮತ್ತು ಸುತ್ತಲ ಪ್ರದೇಶದಲ್ಲಿ ಭೂಮಿಯ ಬೆಲೆ ಸಾಕಷ್ಟು ಏರಿಕೆಯಾಗಿದೆ. ಕೆಲವರು ವಾಣಿಜ್ಯ ಉದ್ದೇಶ, ವೈಯಕ್ತಿಕ ಲಾಭಕ್ಕಾಗಿ ಸರ್ಕಾರಿ ಭೂಮಿ ಒತ್ತುವರಿ ಮಾಡುತ್ತಿದ್ದಾರೆ. ಅಕ್ರಮ ದಾಖಲೆಗಳ ಮೂಲಕ ಭೂಮಿ ಕಬಳಿಸಿದ್ದಾರೆ. ಎ.ಟಿ.ರಾಮಸ್ವಾಮಿ, ವಿ.ಬಾಲಸುಬ್ರಹ್ಮಣ್ಯನ್‌ ಸಮಿತಿಗಳು ನೀಡಿರುವ ವರದಿಯಲ್ಲೂ ಭೂ ಕಬಳಿಕೆ ಪ್ರಕರಣ ಉಲ್ಲೇಖವಾಗಿದೆ ಎಂದು ವಿವರಿಸಿದ್ದರು.

ಸುಮಾರು 75 ಸಾವಿರ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಬೆಂಗಳೂರು ಹಾಗೂ ಸುತ್ತಲ ವ್ಯಾಪ್ತಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ರೆಸಾರ್ಟ್, ಹೋಂಸ್ಟೇಗಳು ತಲೆಯೆತ್ತಿವೆ. 6 ಸಾವಿರಕ್ಕೂ ಹೆಚ್ಚು ಭೂಮಿ ಕಾನೂನುಬಾಹಿರವಾಗಿ ಸ್ವಾಧೀನ ಮಾಡಿಕೊಂಡಿವೆ. ದಾಖಲೆಗಳಲ್ಲಿರುವ ವಿಸ್ತೀರ್ಣ, ವಾಸ್ತವದ ವಿಸ್ತೀರ್ಣಕ್ಕೂ ವ್ಯತ್ಯಾಸವಿದೆ. ಕಂದಾಯ ದಾಖಲೆಗಳನ್ನು ತಿದ್ದಿ ಭೂಮಿ ಕಬಳಿಸಲಾಗಿದೆ ಎಂದು ದೂರಿದ್ದರು.

ADVERTISEMENT

ಭೂ ಆಡಿಟ್‌ ಮಾಡಿಸಬೇಕು. ಒತ್ತುವರಿ ತೆರವುಗೊಳಿಸಬೇಕು. ಮರಳಿ ವಶಕ್ಕೆ ಪಡೆದ ಭೂಮಿಯನ್ನು ಬಹಿರಂಗ ಹರಾಜು ಹಾಕಬೇಕು. ಹಾಗೆ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ದೊರೆಯುತ್ತದೆ. ಸಾರ್ವಜನಿಕರ ಅನುಕೂಲ ಹಾಗೂ ಸಂಪನ್ಮೂಲ ಸಂಗ್ರಹದ ದೃಷ್ಟಿಯಿಂದ ಈ ನಿರ್ಧಾರ ಅತ್ಯಂತ ಸೂಕ್ತವಾದುದು ಎಂದು ರಮೇಶ್‌ ಬಾಬು ಸಲಹೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.