ADVERTISEMENT

ಲೈಂಗಿಕ ಕಿರುಕುಳ: ಸಮಿತಿ ರಚನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 20:15 IST
Last Updated 20 ನವೆಂಬರ್ 2018, 20:15 IST

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಪ್ರಾದೇಶಿಕ ಕಚೇರಿಗಳು, ಸರ್ಕಾರಿ ಹಾಗೂ ಅನುದಾನಿತ ಪ್ರಥಮ
ದರ್ಜೆ ಕಾಲೇಜುಗಳು, ಕಾನೂನು ಹಾಗೂ ಶಿಕ್ಷಣ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ನಿವಾರಣಾ ಸಮಿತಿ ರಚಿಸಬೇಕು ಎಂದು ಇಲಾಖೆಯ ಆಯುಕ್ತರು ಸೂಚನೆ ನೀಡಿದ್ದಾರೆ.

ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯಲು ಪ್ರತಿ ಸರ್ಕಾರಿ ಕಚೇರಿಯಲ್ಲಿ ಆಂತರಿಕ ದೂರು ಸಮಿತಿ ರಚಿಸುವುದು ಕಡ್ಡಾಯ. ಈ ಸಮಿತಿಯ ಕಾರ್ಯವೈಖರಿ ಪರಿಶೀಲಿಸಲು ಇಲಾಖೆಯಿಂದಲೇ ಒಬ್ಬರು ನೋಡಲ್‌ ಅಧಿಕಾರಿಯನ್ನು ನೇಮಿಸಿ ವರದಿ ಪಡೆಯಲಾಗುತ್ತದೆ.

ಸಮಿತಿ ಸದಸ್ಯರು– ಪ್ರಾದೇಶಿಕ ಕಚೇರಿಗಳಲ್ಲಿ: ಅಧ್ಯಕ್ಷರು–ಪ್ರಾದೇಶಿಕ ಕಚೇರಿಯ ಮಹಿಳಾ ಅಧಿಕಾರಿ/ಸ್ಥಳೀಯ ಸರ್ಕಾರಿ ಕಾಲೇಜಿನ
ಮಹಿಳಾ ಪ್ರಾಂಶುಪಾಲರು/ಸಹ ‍‍ಪ್ರಾಧ್ಯಾಪಕರು, ಸದಸ್ಯರು–ಸ್ಥಳೀಯ ಮಹಿಳಾ ಪೊಲೀಸ್‌ ಅಧಿಕಾರಿ, ಸ್ಥಳೀಯ ನೋಂದಾಯಿತ ಸ್ವಯಂಸೇವಾ ಸಂಘಟನೆಯ ಮಹಿಳಾ ಸದಸ್ಯೆ, ಕಚೇರಿಯ ಮೂವರು ಮಹಿಳಾ ನೌಕರರು (ಗ್ರೂಪ್‌ ಬಿ, ಗ್ರೂಪ್‌ ಸಿ ಹಾಗೂ ಗ್ರೂಪ್‌ ಡಿ).

ADVERTISEMENT

ಕಾಲೇಜುಗಳಲ್ಲಿ: ಅಧ್ಯಕ್ಷರು–ಹಿರಿಯ ಮಹಿಳಾ ಉಪನ್ಯಾಸಕರು, ಸದಸ್ಯರು–ಸ್ಥಳೀಯ ಮಹಿಳಾ ಪೊಲೀಸ್‌ ಅಧಿಕಾರಿ, ಸ್ಥಳೀಯ ಸಂಸ್ಥೆಯ ಮಹಿಳಾ ಸದಸ್ಯೆ, ಇಬ್ಬರು ಅಥವಾ ಮೂವರು ಮಹಿಳಾ ಉಪನ್ಯಾಸಕರು, ಕಾಲೇಜಿನ ಮೂವರು ಮಹಿಳಾ ನೌಕರರು (ಗ್ರೂಪ್‌ ಬಿ, ಗ್ರೂಪ್‌ ಸಿ ಹಾಗೂ ಗ್ರೂಪ್‌ ಡಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.