ADVERTISEMENT

‘ಟನ್‌ಗೆ ₹ 1,300 ದರದಲ್ಲಿ ಮೆಕ್ಕೆ ಜೋಳ ನೇರ ಖರೀದಿ: ಮುಖ್ಯಮಂತ್ರಿ ಸೂಚನೆ

ಕೆ.ಎಂ. ಎಫ್

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 17:11 IST
Last Updated 25 ಅಕ್ಟೋಬರ್ 2018, 17:11 IST

ಬೆಂಗಳೂರು: ರೈತರಿಂದ ನೇರವಾಗಿ 2 ಲಕ್ಷ ಟನ್ ಮೆಕ್ಕೆ ಜೋಳ ಖರೀದಿಸಲು ತಕ್ಷಣ ಕ್ರಮಕೈಗೊಳ್ಳುವಂತೆ ಕೆಎಂಎಫ್‌ (ಕರ್ನಾಟಕ ಹಾಲು ಒಕ್ಕೂಟ) ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೂಚಿಸಿದರು.

ಮೆಕ್ಕೆ ಜೋಳ ಮತ್ತು ಅಕ್ಕಿಗೆ ಬೆಂಬಲ ಬೆಲೆ ನಿಗದಿಪಡಿಸುವ ಕುರಿತು ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಪ್ರತಿ ಟನ್ ಮೆಕ್ಕೆ ಜೋಳವನ್ನು ₹ 1,300ರಂತೆ ಖರೀದಿಸಲು ಸೂಚಿಸಿದರು.

ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಈ ಬಾರಿ 54 ಲಕ್ಷ ಟನ್ ಮೆಕ್ಕೆ ಜೋಳ ಇಳುವರಿ ನಿರೀಕ್ಷಿಸಲಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೆಎಂಎಫ್‌ ಮೂಲಕ ನೇರ ಖರೀದಿಗೆ ತೀರ್ಮಾನಿಸಲಾಗಿದೆ. ಇದಕ್ಕಾಗಿ ₹ 50 ಕೋಟಿ ಬಿಡುಗಡೆ ಮಾಡಲಾಗುವುದು’ ಎಂದರು. ಪ್ರತಿ ಟನ್‌ ಅಕ್ಕಿಯನ್ನು ₹ 1,200 ಖರೀದಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.