ವಿಜಯಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಸಂಜೆ ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಏರ್ಪಡಿಸಿರುವ ವರ್ಚ್ಯುವೆಲ್ ವೇದಿಕೆ ಮೂಲಕ, ವಿಜಯಪುರ ಸಮೀಪದ ಅರಕೇರಿಯಲ್ಲಿ ನಿರ್ಮಿಸಲಾಗಿರುವ ಇಂಡಿಯನ್ ರಿಸರ್ವ್ ಬಟಾಲಿಯನ್ನ (ಐಆರ್ಬಿ)ಆಡಳಿತ ಭವನದ ನೂತನ ಕಟ್ಟಡದಉದ್ಘಾಟನೆ ನೆರವೇರಿಸಲಿದ್ದಾರೆ.
ಈ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ಐಆರ್ಬಿಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ.2010ರಲ್ಲಿ ಆರಂಭವಾದ ರಾಜ್ಯದ ಎರಡನೇ ಐಆರ್ ಬಿ ಸೆಂಟರ್ ಇದಾಗಿದ್ದು, 100 ಎಕರೆ ವಿಸ್ತೀರ್ಣ ಹೊಂದಿದೆ. ಸದ್ಯ 746 ಸಿಬ್ಬದಿ ಇದ್ದಾರೆ. ಸಿಬ್ಬಂದಿಗೆ 455 ಕ್ವಾಟ್ರಸ್ ಇವೆ. ₹ 9.62 ಕೋಟಿ ಅನುದಾನದಲ್ಲಿ ನೂತನ ಆಡಳಿತ ಭವನ ನಿರ್ಮಾಣವಾಗಿದೆ. ಸಭಾಂಗಣ, ಕಮಾಡೆಂಟ್ ಕಚೇರಿ ಒಳಗೊಂಡಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.