ADVERTISEMENT

ಚಿಕ್ಕಮಗಳೂರಿನ ಜವಾಹರ್‌ ನವೋದಯ ವಿದ್ಯಾಲಯದಲ್ಲಿ 69 ಮಂದಿಗೆ ಕೋವಿಡ್ ದೃಢ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 8:24 IST
Last Updated 5 ಡಿಸೆಂಬರ್ 2021, 8:24 IST
ಎನ್.ಆರ್.ಪುರ ತಾಲ್ಲೂಕಿನ ಸೀಗೊಡಿನ ಜವಾವರ್ ನವೋದಯ ವಿದ್ಯಾಲಯದಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು
ಎನ್.ಆರ್.ಪುರ ತಾಲ್ಲೂಕಿನ ಸೀಗೊಡಿನ ಜವಾವರ್ ನವೋದಯ ವಿದ್ಯಾಲಯದಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು   

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಸೀಗೊಡಿನ ಜವಾವರ್ ನವೋದಯ ವಿದ್ಯಾಲಯದಲ್ಲಿ ಈವರೆಗೆ 59 ವಿದ್ಯಾರ್ಥಿಗಳು ಮತ್ತು 10 ಸಿಬ್ಬಂದಿ ಒಟ್ಟು 69 ಮಂದಿಗೆ ಕೋವಿಡ್ ದೃಢಪಟ್ಟಿದೆ.

ಶಾಲೆಯನ್ನು ಸೀಲ್ ಡೌನ್ ಮಾಡಲಾಗಿದೆ. ವೈದ್ಯರು, ಆರೋಗದಯ ನಿರೀಕ್ಷಕರು,ಶುಶ್ರೂಷಕಿಯರನ್ನು ಚಿಕಿತ್ಸೆ ಕಾರ್ಯಕ್ಕೆ ಶಾಲೆಗೆ ನಿಯೋಜಿಸಲಾಗಿದೆ.

'ಸೋಂಕಿತರು ಇರಲು ಪ್ರತ್ಯೇಕ ಬ್ಲಾಕ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎನ್.ಉಮೇಶ್ 'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ಶಾಲೆಯ ಎಲ್ಲ 418 ಮಂದಿಯ ಗಂಟಲು, ಮೂಗಿನ ದ್ರವ ಪರೀಕ್ಷೆಗೆ ಕಳಿಸಲಾಗಿದೆ. ಇನ್ನು ಹಲವರ ಪರೀಕ್ಷೆ ವರದಿ ಬರಬೇಕಿದೆ. ಶಾಲೆ ತರಗತಿ, ಇತರ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.