ADVERTISEMENT

ಗೂರ್ಖಾ ಕೈಯಲ್ಲಿ ಕಿರೀಟ ಬಿಟ್ಟು ಹೋದ ಕಳ್ಳ!

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 20:43 IST
Last Updated 19 ಸೆಪ್ಟೆಂಬರ್ 2019, 20:43 IST
ಗೂರ್ಖಾ ಹರಿಸಿಂಗ್ ಅವರನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಪೊಲೀಸರು ಸನ್ಮಾನಿಸಿದರು
ಗೂರ್ಖಾ ಹರಿಸಿಂಗ್ ಅವರನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಪೊಲೀಸರು ಸನ್ಮಾನಿಸಿದರು   

ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಸರೂರ ಗ್ರಾಮದ ಗಚ್ಚಿನ ಗುಡಿ ರೇವಣಸಿದ್ದೇಶ್ವರ ದೇವರಿಗೆ ಹಾಕಲಾಗಿದ್ದ 850 ಗ್ರಾಂ ತೂಕದ ಬೆಳ್ಳಿ ಕಿರೀಟ ಬುಧವಾರ ರಾತ್ರಿ ಕಳುವಾಗಿದ್ದು, ಆಶ್ಚರ್ಯಕರ ರೀತಿಯಲ್ಲಿ ಗುರುವಾರ ದೊರಕಿದೆ.

ರಾತ್ರಿ ಗಸ್ತಿನಲ್ಲಿದ್ದ ನೇಪಾಳಿ ಗೂರ್ಖಾ ಹರಿಸಿಂಗ್ ದ್ಯಾಮವ್ವನ ಗುಡಿಯ ಬಳಿ ಬಂದಾಗ, ಅಲ್ಲಿಯೂ ಕಿರೀಟ ಕದಿಯಲು ಹೊಂಚು ಹಾಕಿದ್ದ ಕಳ್ಳನ ಕಂಡುಹಿಡಿಯಲು ಹೋಗುತ್ತಿದ್ದಂತೆ ಆತ ಸರೂರ ಗ್ರಾಮದಿಂದ ಕದ್ದು ತಂದಿದ್ದ ಬೆಳ್ಳಿ ಕಿರೀಟ ಬಿಟ್ಟು ಪರಾರಿಯಾಗಿದ್ದಾನೆ.

ತನಗೆ ಸಿಕ್ಕ ಈ ಕಿರೀಟವನ್ನು ಹರಿಸಿಂಗ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಿರೀಟ ಕಳುವಾದ ಬಗ್ಗೆ ಗುರುವಾರ ಬೆಳಿಗ್ಗೆ ಪ್ರಕರಣ ದಾಖಲಿಸಲು ಬಂದ ಗ್ರಾಮಸ್ಥರಿಗೆ ಪೊಲೀಸರು ಕಿರೀಟ ಒಪ್ಪಿಸಿದ್ದಾರೆ. ನಂತರ ಪೊಲೀಸರು ಹರಿಸಿಂಗ್ ಅವರನ್ನು ಸನ್ಮಾನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.