ADVERTISEMENT

ಬಿಆರ್‌ಪಿ–ಸಿಆರ್‌ಪಿ ಹುದ್ದೆ ಆಯ್ಕೆಗೆ ಕೌನ್ಸೆಲಿಂಗ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 18:55 IST
Last Updated 18 ಸೆಪ್ಟೆಂಬರ್ 2020, 18:55 IST

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ವೃಂದದ ಬಿಆರ್‌ಪಿ–ಸಿಆರ್‌ಪಿ ಹುದ್ದೆಗಳ ಆಯ್ಕೆಗಾಗಿ ಇದೇ 21 ಮತ್ತು 22ರಂದು ಕೌನ್ಸೆಲಿಂಗ್‌ ನಡೆಯಲಿದೆ.

ಲಿಖಿತ ಪರೀಕ್ಷೆಯ ಪತ್ರಿಕೆ–1 ಮತ್ತು ಪತ್ರಿಕೆ– 2ರಲ್ಲಿನ ಶೇ 50ರ ನಿಯಮವನ್ನು ಸಡಿಲಿಸಿ, ಮೆರಿಟ್‌ ಆಧಾರದ ಮೇಲೆ ಪಟ್ಟಿ ಸಿದ್ಧ ಮಾಡಲು ಆಯಾ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಲಾಗಿದೆ. ಖಾಲಿ ಇರುವ ಹುದ್ದೆಗಳ ವಿವರವನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಶುಕ್ರವಾರ (ಸೆ.18) ದಾಖಲಿಸಲಾಗಿದೆ. ಶನಿವಾರ ಈ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಕೌನ್ಸೆಲಿಂಗ್‌ಗೆ ಅರ್ಹರಾದವರ ಅಂತಿಮ ಪಟ್ಟಿಯನ್ನು ಶನಿವಾರವೇ ಪ್ರಕಟಿಸಲಾಗುತ್ತದೆ. ಈ ಅಭ್ಯರ್ಥಿಗಳಿಗೆ 21 ಮತ್ತು 22ರಂದು ಕೌನ್ಸೆಲಿಂಗ್‌ ನಡೆಸಲಾಗುತ್ತದೆ.

ADVERTISEMENT

ಇದೇ ಫೆಬ್ರುವರಿ ಮತ್ತು ಮೇ ತಿಂಗಳಲ್ಲಿ ನಡೆದ ಕೌನ್ಸೆಲಿಂಗ್‌ ಪ್ರಕ್ರಿಯೆಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳದವರಿಗೆ ಈ ಕೌನ್ಸೆಲಿಂಗ್‌ಗೆ ಹಾಜರಾಗಲು ಅವಕಾಶವಿಲ್ಲ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.