ADVERTISEMENT

ರಾಜ್ಯಕ್ಕಿಲ್ಲ ‘ಪವನ್’ ಚಂಡಮಾರುತ ಭೀತಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 17:39 IST
Last Updated 7 ಡಿಸೆಂಬರ್ 2019, 17:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅರಬ್ಬಿ ಸಮುದ್ರದ ನೈರುತ್ಯ ಭಾಗದಲ್ಲಿ ಅಪ್ಪಳಿಸಿರುವ ‘ಪವನ್‌’ ಚಂಡಮಾರುತದಿಂದ ರಾಜ್ಯಕ್ಕೆ ಯಾವುದೇ ಅಪಾಯ ಇಲ್ಲ. ಆದರೆ, ಚಂಡಮಾರುತದ ಪರಿಣಾಮವಾಗಿ ತಾಪಮಾನ ಕುಸಿದಿದೆ. ಹೀಗಾಗಿ ಮುಂದಿನ 24 ಗಂಟೆಗಳವರೆಗೆ ರಾಜ್ಯದಾದ್ಯಂತ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತದ ಪರಿಣಾಮ ಗುಜರಾತ್‌ನ ಕೆಲವೆಡೆ ಶನಿವಾರ ಅಕಾಲಿಕ ಮಳೆಯಾಗಿದೆ. ಕರ್ನಾಟಕ ಸೇರಿ, ಗೋವಾ, ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು, ಲಕ್ಷದ್ವೀಪ, ಕೇರಳ ರಾಜ್ಯಗಳಿಗೆಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಮುನ್ಸೂಚನೆ ನೀಡಿತ್ತು.ಪಶ್ಚಿಮ ಹಾಗೂ ನೈರುತ್ಯ ದಿಕ್ಕಿನೆಡೆಗೆ ಸಾಗುತ್ತಿರುವ ಚಂಡಮಾರುತ, ಸೊಮಾಲಿಯಾ ಕರಾವಳಿ ಭಾಗದತ್ತ ಮುಖ ಮಾಡಿದೆ.

ಭಾನುವಾರ (ಡಿ.8) ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು, ಕರಾವಳಿ ಭಾಗದಲ್ಲಿ ಶುಷ್ಕ ವಾತಾವರಣ ಇರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.