ADVERTISEMENT

ದಾಬಸ್‌ಪೇಟೆಯಲ್ಲಿ ಉಪೇಂದ್ರ ಪ್ರಚಾರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 19:41 IST
Last Updated 5 ಏಪ್ರಿಲ್ 2019, 19:41 IST
ಪಕ್ಷದ ಅಭ್ಯರ್ಥಿ ಪರವಾಗಿ ಬೀದಿಬದಿ ವ್ಯಾಪಾರಿಗಳಲ್ಲಿ ಮತಯಾಚಿಸಿದ ಉಪೇಂದ್ರ
ಪಕ್ಷದ ಅಭ್ಯರ್ಥಿ ಪರವಾಗಿ ಬೀದಿಬದಿ ವ್ಯಾಪಾರಿಗಳಲ್ಲಿ ಮತಯಾಚಿಸಿದ ಉಪೇಂದ್ರ   

ದಾಬಸ್‌ಪೇಟೆ: ‘ಮತ ಹಾಕುವವರೆಗೆ ಮಾತ್ರ ನಿಮಗೆ ಅಧಿಕಾರ, ನಂತರ ಯಾರು ಗೆಲ್ಲುತ್ತಾರೋ ಅವರದ್ದೇ ಕಾರುಬಾರು. ಆದರೆ, ನಮ್ಮ ಪಕ್ಷದ ಧ್ಯೇಯ ಹಾಗಲ್ಲ. ಇಲ್ಲಿ ನಿಮ್ಮದೇ ಅಧಿಕಾರ ಹಾಗೂ ಕಾರುಬಾರು’ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ಹೇಳಿದರು.

ಪಕ್ಷದ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಜಿ.ಮುನಿರಾಜು ಪರವಾಗಿ ದಾಬಸ್‌ಪೇಟೆ ಪಟ್ಟಣದಲ್ಲಿ ಅವರು ಮತಯಾಚನೆ ಮಾಡಿದರು.

‘ನಮಗೆ ರಾಜಕೀಯ ಬೇಡ, ನಮಗೆ ಬೇಕಿರುವುದು ಪ್ರಜಾಕೀಯ. ಬನ್ನಿ ಬದಲಾವಣೆ ತರೋಣ. ನಾವು ನಾಯಕರು ಅಲ್ಲ, ನಿಮ್ಮಿಂದ ಸಂಬಳ ಪಡೆದು ಕೆಲಸ ಮಾಡುವ ಕಾರ್ಮಿಕರು. ನಿಮ್ಮಿಂದ ಮತ ಪಡೆದು 5 ವರ್ಷ ನಿಮ್ಮನ್ನು ಅಡಿಯಾಳಾಗಿಸಿಕೊಳ್ಳುವ ವ್ಯವಸ್ಥೆ ಇಂದಿದೆ. ನಮ್ಮದು ಪ್ರಜ್ಞಾವಂತ ಪ್ರಜೆಗಳ ಪಕ್ಷ. ನಮಗೆ ಸಾಥ್ ನೀಡಿ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.