ADVERTISEMENT

ಅಪಾಯಕಾರಿ ರಸ್ತೆ: ಕರ್ನಾಟಕಕ್ಕೆ 2ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 20:52 IST
Last Updated 23 ಡಿಸೆಂಬರ್ 2019, 20:52 IST
   

ನವದೆಹಲಿ: ದಕ್ಷಿಣ ಭಾರತದ ರಾಜ್ಯಗಳಲ್ಲಿ ಎರಡನೇ ಅತಿ ಹೆಚ್ಚು ಅಪಾಯಕಾರಿ ರಸ್ತೆಗಳನ್ನು ಕರ್ನಾಟಕ ಹೊಂದಿದೆ. ಕಳೆದ 27 ವರ್ಷಗಳಲ್ಲಿ ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ಮಂದಿ ರಸ್ತೆ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂದುಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ವರದಿ ತಿಳಿಸಿದೆ.

2017ರಲ್ಲಿ ಪ್ರತಿ 1 ಲಕ್ಷ ಮಂದಿಗೆ ಅಪಘಾತದಲ್ಲಿ ಮೃತಪಟ್ಟವರ ಪ್ರಮಾಣಕರ್ನಾಟಕದಲ್ಲಿ 16.9 ಇದೆ. ನೆರೆಯ ತಮಿಳುನಾಡು ಮೊದಲ ಸ್ಥಾನದಲ್ಲಿದ್ದು ಇಲ್ಲಿ ಈ ಪ್ರಮಾಣ20 ಇದೆ. ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ (15.8), ತೆಲಂಗಾಣ (14.4), ಕೇರಳ (14) ಮತ್ತು ಗೋವಾ (11.1) ಇದೆ.

ದೇಶದಲ್ಲಿಯೇ ಅಪಾಯಕಾರಿ ರಸ್ತೆಗಳನ್ನು ಉತ್ತರಾಖಂಡ ಹೊಂದಿದೆ. ಇಲ್ಲಿ ಒಂದು ಲಕ್ಷ ಮಂದಿಗೆ ಮೃತಪಡುವವರ ಪ್ರಮಾಣ 26.3 ಇದೆ.ನಂತರದ ಸ್ಥಾನದಲ್ಲಿ ಪಂಜಾಬ್‌ (22.9) ಇದೆ.

ADVERTISEMENT

ಮೂರು ದಶಕಗಳಿಗೆ ಹೋಲಿಸಿದರೆ ರಸ್ತೆಗಳ ಪರಿಸ್ಥಿತಿ ಭಿನ್ನವಾಗಿದೆ. ಆಗ ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಿಗಿಂತ ಕರ್ನಾಟಕದ ರಸ್ತೆಗಳು ಉತ್ತಮವಾಗಿದ್ದವು. ಗೋವಾ ಮಾತ್ರ ಕರ್ನಾಟಕಕ್ಕಿಂತ ಉತ್ತಮ ರಸ್ತೆಗಳನ್ನು ಹೊಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.