ADVERTISEMENT

ದೊರೆಸ್ವಾಮಿ ಕುರಿತು ಸದನದಲ್ಲಿ ಚರ್ಚೆ: ಯಡವಟ್ಟು ಮಾಡಿಕೊಂಡ ರೇವಣ್ಣ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 9:21 IST
Last Updated 3 ಮಾರ್ಚ್ 2020, 9:21 IST
ಎಚ್‌. ಡಿ ರೇವಣ್ಣ
ಎಚ್‌. ಡಿ ರೇವಣ್ಣ    

ಬೆಂಗಳೂರು: ದೊರೆಸ್ವಾಮಿ ಅವರ ಕುರಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆ ನಡೆಯುತ್ತಿರುವ ವೇಳೆ ಮಾಜಿ ಶಾಸಕ ಎಚ್‌.ಡಿರೇವಣ್ಣ ಯಡವಟ್ಟು ಮಾಡಿಕೊಂಡಿದ್ದಾರೆ.

ದೊರೆಸ್ವಾಮಿ ವಿಷಯದಲ್ಲಿ ಮಾತನಾಡಲು ಎದ್ದು ನಿಂತ ಜೆಡಿಎಸ್ ಶಾಸಕ ಎಚ್. ಡಿ.ರೇವಣ್ಣ ದೊರೆಸ್ವಾಮಿ 100 ತುಂಬಿದ ರಾಜಕಾರಣಿ ಎಂದು ಹೇಳಿದರು. ಆಗಬಿಜೆಪಿ ಸದಸ್ಯರು, ಹೋ ಎಂದು ಕೂಗು ಹಾಕಿ ‘ಸರಿಯಾಗಿ ಹೇಳಿದ್ದೀರಿ’ ಎಂದರು.

ತಮ್ಮ ತಪ್ಪಿನ ಅರಿವಾಗುತ್ತಲೇ ರೇವಣ್ಣ, ಅವರುರಾಜಕಾರಣಿ ಅಲ್ಲ ಸ್ವಾತಂತ್ರ್ಯ ಹೋರಾಟಗಾರ ಎಂದರು.

ADVERTISEMENT

ಬಿಜೆಪಿ ಶಾಸಕರೊಬ್ಬರು, ‘ಸರಿಯಾಗಿ ಹೇಳಿದೆ ಅಣ್ಣ. ಅವರು ರಾಜಕಾರಣಿಯೇ ಆಗಿದ್ದಾರೆ,’ ಎಂದರು. ಆಗ ಕಾಂಗ್ರೆಸ್ ಶಾಸಕರು ಬಿಜೆಪಿ ವಿರುದ್ಧ ಏರಿದ ಧ್ವನಿಯಲ್ಲಿ ಘೋಷಣೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.