ADVERTISEMENT

ಬೆಳಗಾವಿಯಲ್ಲಿ ನನ್ನನ್ನು ಬಿಟ್ಟು ಏನೂ ನಡೆಯಲ್ಲ: ಡಿ.ಕೆ ಶಿವಕುಮಾರ್

ಜಾರಕಿಹೊಳಿ ಸಹೋದರರಿಗೆ ಟಾಂಗ್

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2018, 8:41 IST
Last Updated 23 ನವೆಂಬರ್ 2018, 8:41 IST
   

ಬೆಳಗಾವಿ: ನನ್ನನ್ನು ಬಿಟ್ಟು ಬೆಳಗಾವಿಯಲ್ಲಿ ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಜಾರಕಿಹೊಳಿ ಸಹೋದರರಿಗೆ ಟಾಂಗ್ ನೀಡಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಚಿವ ರಮೇಶ ಜಾರಕಿಹೊಳಿ‌ ನನ್ನ ಸ್ನೇಹಿತ. ಅವರ ಬಗ್ಗೆ ಇಲ್ಲಸಲ್ಲದ ಗಾಸಿಪ್ ಹಬ್ಬಿಸಲಾಗುತ್ತಿದೆ. ನಾನೇಕೆ ಪಕ್ಷದ ಸಭೆಯಲ್ಲಿ ಭಾಗಿಯಾಗಬಾರದು? ಎಂದು ಪ್ರಶ್ನಿಸಿದರು

ನಾನು, ಸರ್ಕಾರ ಎಲ್ಲಾ ಸಮಸ್ಯೆ ಬಂದಾಗ ಚರ್ಚೆ ಮಾಡುತ್ತೇನೆ. ಬಳ್ಳಾರಿಯಲ್ಲಿಯೂ ರೈತರ ಸಭೆ ನಡೆಸಿ ಬಂದಿದ್ದೇನೆ. ಯಾರಿಗೂ ಗುತ್ತಿಗೆ ಕೊಡುವುದಕ್ಕೆ ಆಗುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ADVERTISEMENT

ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಭೆ ನಡೆಸಿದ್ದಾರೆ. ಸರ್ಕಾರ ರೈತರ ಪರವಿದ್ದು, ರೈತರನ್ನು ಕೈ ಬಿಡುವ ಪ್ರಶ್ನೆಯೇ‌ ಇಲ್ಲ. ನಮ್ಮ ಸರ್ಕಾರ ರೈತರ ಪರವಿದೆ ಎಂದರು.

ಸಚಿವ ರಮೇಶ ಜಾರಕಿಹೊಳಿ‌ ತಟಸ್ಥ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಪೌರಾಡಳಿತ ಸಚಿವರಾಗಿ ನಗರಸಭೆ, ಪುರಸಭೆ ಭೇಟಿಗಳಲ್ಲಿ ಅವರು ಬ್ಯುಸಿ ಇರಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.