ADVERTISEMENT

ಶಾಲಾ, ಕಾಲೇಜುಗಳಿಗೆ ನೀರು: ಜಿಲ್ಲಾಧಿಕಾರಿಗಳಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಮೇ 2019, 17:05 IST
Last Updated 21 ಮೇ 2019, 17:05 IST

ಬೆಂಗಳೂರು: ರಾಜ್ಯದೆಲ್ಲೆಡೆ ಪಿಯು ತರಗತಿಗಳು ಆರಂಭವಾಗಿದ್ದು, ಇದೇ 29ರಿಂದ ಶಾಲೆಗಳೂ ತೆರೆಯಲಿವೆ. ಹೀಗಾಗಿ ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಎಲ್ಲ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

‘ರಾಜ್ಯದ ಹಲವೆಡೆ ನೀರಿನ ಅಭಾವ ತೀವ್ರವಾಗಿದೆ. ಆದರೆ ಶಾಲಾ, ಕಾಲೇಜುಗಳು ಆರಂಭ ಆಗಿರುವುದರಿಂದ ವಿದ್ಯಾರ್ಥಿಗಳಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸಬೇಕಾಗಿದೆ. ಹೀಗಾಗಿ ಟ್ಯಾಂಕರ್‌ ಬಳಸಿಯಾದರೂ ನೀರು ಪೂರೈಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ವಿನಂತಿ ಮಾಡಿದ್ದೇನೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಾಲೇಜುಗಳು ನೀರಿಲ್ಲದ ಸಲುವಾಗಿ ತರಗತಿ ಆರಂಭವನ್ನು ಮುಂದೂಡಲು ಕೋರಿಕೆ ಸಲ್ಲಿಸಿ
ದ್ದವು. ಆದರೆ ಇಲಾಖೆ ಇದನ್ನು ತಳ್ಳಿಹಾಕಿದ್ದು, ಜಿಲ್ಲಾಡಳಿತದ ಮೂಲಕ ನೀರು ಒದಗಿಸುವುದಾಗಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.