ADVERTISEMENT

ಶಿಕ್ಷಣ ಸಂಸ್ಥೆ ಲಾಂಛನ ಜಾಹೀರಾತು ವ್ಯಾಪ್ತಿಗೆ ಹೊರತು: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 16:17 IST
Last Updated 5 ಜುಲೈ 2025, 16:17 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ‘ಹೆಸರು, ದಿಕ್ಸೂಚಿ ಅಥವಾ ನಿರ್ದಿಷ್ಟ ಲಾಂಛನ ಒಳಗೊಂಡ ಶೈಕ್ಷಣಿಕ ಸಂಸ್ಥೆಯ ಹೆಸರು ಪ್ರದರ್ಶಿಸಿದ ಮಾತ್ರಕ್ಕೆ ಅದನ್ನು ತೆರಿಗೆ ವಿಧಿಸಬಹುದಾದ ಜಾಹೀರಾತು ಎಂದು ಪರಿಗಣಿಸಲು ಆಗದು’ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.

ಈ ಸಂಬಂಧ ಹೊಸಕೆರೆಹಳ್ಳಿಯ ಗುಪ್ತಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಎಸ್.ಗುಪ್ತಾ ಸಲ್ಲಿಸಿದ್ದ ರಿಟ್ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸಚಿನ್‌ ಶಂಕರ್ ಮಗದುಮ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ADVERTISEMENT

‘ವಾಣಿಜ್ಯ ಚಟುವಟಿಕೆಯ ಅಂಶ ಇರಬೇಕು ಮತ್ತು ಅಂತಹ ಜಾಹೀರಾತಿನಿಂದ ಆದಾಯ ಬರುವಂತಿದ್ದರೆ ಮಾತ್ರವೇ ತೆರಿಗೆ ವಿಧಿಸಬಹುದು’ ಎಂದು ನ್ಯಾಯಪೀಠ ಹೇಳಿದೆ.

ಅಂತೆಯೇ, ಅರ್ಜಿದಾರರ ಶಿಕ್ಷಣ ಸಂಸ್ಥೆ ಪ್ರಚಾರಕ್ಕಾಗಿ ಅಳವಡಿಸಿರುವ ಜಾಹೀರಾತಿಗೆ ವಾಣಿಜ್ಯ ತೆರಿಗೆ ಪಾವತಿಸುವಂತೆ ನೀಡಲಾಗಿದ್ದ ಡಿಮ್ಯಾಂಡ್ ನೋಟಿಸ್ ರದ್ದುಪಡಿಸಿ ಆದೇಶಿಸಿದೆ.

‘ಅರ್ಜಿದಾರರು ಜಾಹೀರಾತು ತೆರಿಗೆ ವಿನಾಯಿತಿ ಕೋರಿ ಸಲ್ಲಿಸಿರುವ ಎರಡು ಮನವಿಗಳನ್ನು ಎಂಟು ವಾರಗಳ ಒಳಗಾಗಿ ಪರಿಗಣಿಸಿ, ಕಾನೂನು ಪ್ರಕಾರ ಆದೇಶಿಸಬೇಕು’ ಎಂದು ನಿರ್ದೇಶಿಸಿದೆ‌.

ಅರ್ಜಿದಾರರ ಪರ ಹೈಕೋರ್ಟ್ ವಕೀಲ ಟಿ.ಪಿ. ರಾಜೇಂದ್ರ ಕುಮಾರ್‌ ಸುಂಗೆ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.