ADVERTISEMENT

ಪಿಯು: ಸಿಗದ ಮೌಲ್ಯಮಾಪನ ಗೌರವಧನ

ಉಪನ್ಯಾಸಕರಿಂದ ಬ್ಯಾಂಕ್‌ ಖಾತೆ, ಐಎಫ್‌ಎಸ್‌ಸಿ ಕೋಡ್‌ ಪಡೆದರೂ ಹಣ ಮಾತ್ರ ಬಂದಿಲ್ಲ

​ಪ್ರಜಾವಾಣಿ ವಾರ್ತೆ
Published 31 ಮೇ 2019, 20:27 IST
Last Updated 31 ಮೇ 2019, 20:27 IST

ಬೆಂಗಳೂರು: ದ್ವಿತೀಯ ಪಿಯುಮೌಲ್ಯಮಾಪನ ಕಾರ್ಯ ಕೊನೆಗೊಂಡು ಎರಡು ತಿಂಗಳಾಗಿದ್ದು, ಫಲಿತಾಂಶ ಬಂದು ಒಂದೂವರೆ ತಿಂಗಳಾಗಿದೆ. ಆದರೆ ಉಪನ್ಯಾಸಕರಿಗೆ ಮಾತ್ರ ಮೌಲ್ಯಮಾಪನದ ಗೌರವಧನ ಸಂದಾಯವಾಗಿಲ್ಲ.

ಎರಡು ವರ್ಷಗಳ ಹಿಂದಿನವರೆಗೂ ಮೌಲ್ಯಮಾಪನ ಕೇಂದ್ರಗಳಲ್ಲೇ ಗೌರವಧನದ ಚೆಕ್‌ ನೀಡಲಾಗುತ್ತಿತ್ತು. ಆದರೆ ಇದೀಗ ಬ್ಯಾಂಕ್‌ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್‌ ಪಡೆಯುತ್ತಿದ್ದಾರೆಯೇ ಹೊರತು ಗೌರವಧನವನ್ನು ಆಮೇಲೆ ಕಳುಹಿಸಲಾಗುತ್ತದೆ ಎಂದು ತಿಳಿಸಲಾಗುತ್ತಿದೆ. ಎರಡು ತಿಂಗಳಾದರೂ ಗೌರವಧನ ಸಿಗದೆ ಇರುವುದರಿಂದ ಉಪನ್ಯಾಸಕರು ಬೇಸರಗೊಂಡಿದ್ದಾರೆ.

‘ಪದವಿಪೂರ್ವ ಶಿಕ್ಷಣ ಇಲಾಖೆಗೆ ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಅವರು ಏನೇನೋ ಕಾರಣ ನೀಡುತ್ತ ಗೌರವಧನ ನೀಡುವುದನ್ನು ಮುಂದೂಡುತ್ತಿದ್ದಾರೆ. ಒಂದು ವಾರದೊಳಗೆ ಎಲ್ಲ ಗೌರವಧನ ಪಾವತಿಸದಿದ್ದರೆ ಉಗ್ರ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಪಿ.ಕರಬಸಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.