ADVERTISEMENT

ರೈತರ ಹುತ್ಮಾತ ದಿನಾಚರಣೆ 21ಕ್ಕೆ 

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 16:12 IST
Last Updated 17 ಜುಲೈ 2025, 16:12 IST
<div class="paragraphs"><p> ರೈತರ ಪ್ರತಿಭಟನೆ</p></div>

ರೈತರ ಪ್ರತಿಭಟನೆ

   

ಬೆಂಗಳೂರು: ಅಖಂಡ ಕರ್ನಾಟಕ ರಾಜ್ಯ ರೈತ ಸಂಘದಿಂದ ಇದೇ 21ರಂದು ಗಾಂಧಿ ಭವನದಲ್ಲಿ ರೈತರ ಹುತಾತ್ಮ ದಿನಾಚರಣೆ ನಡೆಯಲಿದೆ. 

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಿದ್ದನಗೌಡ ಪಾಟೀಲ, ‘ದೇಶದಾದ್ಯಂತ ಜುಲೈ 21ರಂದು ರೈತರ ಹುತ್ಮಾತ ದಿನಾಚರಣೆ ಆಯೋಜಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನವಲಗುಂದ ಮತ್ತು ನರಗುಂದದ ರೈತ ಬಂಡಾಯದಲ್ಲಿ ಹುತ್ಮಾತರಾದ ಈರಪ್ಪ ಕಡ್ಲಿಕೊಪ್ಪ ಮತ್ತು ಬಸವಪ್ಪ ಲಕ್ಕುಂಡಿ ಅವರ ಸ್ಮರಣೆ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ, ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.