ADVERTISEMENT

ದ್ವಿತೀಯ ಪಿಯು ಬಳಿಕ ಪ್ರಥಮ ಪಿಯು ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 19:31 IST
Last Updated 20 ಮಾರ್ಚ್ 2021, 19:31 IST
ಪದವಿಪೂರ್ವ ಶಿಕ್ಷಣ ಇಲಾಖೆ
ಪದವಿಪೂರ್ವ ಶಿಕ್ಷಣ ಇಲಾಖೆ   

ಬೆಂಗಳೂರು: ಇದೇ ಮೊದಲ ಬಾರಿಗೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಮುಗಿದ ಬಳಿಕ ಪ್ರಥಮ ಪಿಯು ಪರೀಕ್ಷೆಗಳನ್ನು ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಕೋವಿಡ್‌ ಕಾರಣದಿಂದ ಪ್ರಸಕ್ತ ಸಾಲಿನಲ್ಲಿ ಜ. 1ರಿಂದ ದ್ವಿತೀಯ ಪಿಯು ಹಾಗೂ ಫೆ. 1ರಿಂದ ಪ್ರಥಮ ಪಿಯು ತರಗತಿಗಳು ಆರಂಭವಾಗಿದ್ದವು.

ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ಮೇ 24ರಿಂದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಆರಂಭಗೊಂಡು ಜೂನ್‌ 16ರಂದು ಕೊನೆಯಾಗಲಿದೆ. ಜೂನ್‌ 18ರಿಂದ ಜುಲೈ 13ರವರೆಗೆ ಮೌಲ್ಯಮಾಪನ ನಡೆಯಲಿದೆ. ಪ್ರಥಮ ಪಿಯುಪರೀಕ್ಷೆಗಳು ಜುಲೈ 5ರಿಂದ 17ರವರೆಗೆ ನಡೆಯಲಿದೆ.

ADVERTISEMENT

19ರಿಂದ 28ರವರೆಗೆ ಪ್ರಥಮ ಪಿಯು ಮೌಲ್ಯಮಾಪನ ನಡೆದು 30ರಂದು ಫಲಿತಾಂಶ ಪ್ರಕಟವಾಗಲಿದೆ. ಆಗಸ್ಟ್‌ 2ರಿಂದ ದ್ವಿತೀಯ ಪಿಯು ದಾಖಲಾತಿ, ಪರೀಕ್ಷೆಗಳು ಆರಂಭವಾಗಲಿದೆ.

ಶೈಕ್ಷಣಿಕ ಚಟುವಟಿಕೆಯ ವೇಳಾಪಟ್ಟಿಯನ್ನು ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಕಳುಹಿಸಿರುವ ಇಲಾಖೆಯ ನಿರ್ದೇಶಕರು, ಅದನ್ನು ಅನುಸರಿಸುವಂತೆ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.