ADVERTISEMENT

‘ಸಾಗರಮಾಲಾ’ ವಿರುದ್ಧ ಮಹಿಳೆಯರ ಪ್ರತಿಭಟನೆ; ಮುಖಂಡರು ಪೊಲೀಸ್ ವಶಕ್ಕೆ

ಸಮುದ್ರಕ್ಕಿಳಿದು ಪ್ರತಿಭಟಿಸಿದ ಮೀನುಗಾರ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 20:00 IST
Last Updated 13 ಜನವರಿ 2020, 20:00 IST
ಸಾಗರಮಾಲಾ ಯೋಜನೆಯಡಿ ವಾಣಿಜ್ಯ ಬಂದರಿನ ವಿಸ್ತರಣೆ ವಿರೋಧಿಸಿ ಕಾರವಾರದಲ್ಲಿ ಮೀನುಗಾರ ಮಹಿಳೆಯರು ಸೋಮವಾರ ಸಮುದ್ರಕ್ಕಿಳಿದು ಪ್ರತಿಭಟಿಸಿದರು
ಸಾಗರಮಾಲಾ ಯೋಜನೆಯಡಿ ವಾಣಿಜ್ಯ ಬಂದರಿನ ವಿಸ್ತರಣೆ ವಿರೋಧಿಸಿ ಕಾರವಾರದಲ್ಲಿ ಮೀನುಗಾರ ಮಹಿಳೆಯರು ಸೋಮವಾರ ಸಮುದ್ರಕ್ಕಿಳಿದು ಪ್ರತಿಭಟಿಸಿದರು   

ಕಾರವಾರ: ‘ಸಾಗರಮಾಲಾ’ ಯೋಜನೆ ಯಡಿ ಇಲ್ಲಿನ ವಾಣಿಜ್ಯ ಬಂದರು ವಿಸ್ತರಣೆಗೆ ಸ್ಥಳೀಯ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನೂರಾರು ಮಹಿಳೆಯರು ಸೋಮವಾರ ಸಮುದ್ರಕ್ಕಿಳಿದು ಪ್ರತಿಭಟಿಸಿದರು.

ಬೆಳಿಗ್ಗೆ ಕಾಮಗಾರಿ ಆರಂಭವಾಗು ತ್ತಿದ್ದಂತೆಯೇ ಪ್ರತಿಭಟನಕಾರರು ಯೋಜನಾ ಪ್ರದೇಶದಲ್ಲಿ ಜಮಾಯಿಸಿ ದರು. ಪೊಲೀಸರು ಅಳವಡಿಸಿದ್ದ ಬ್ಯಾರಿ ಕೇಡ್‌ಗಳನ್ನು ದಾಟಿದರು. ಘೋಷಣೆ ಕೂಗುತ್ತಾ ಜೆಸಿಬಿ ಯಂತ್ರಗಳತ್ತ ನುಗ್ಗಲು ಯತ್ನಿಸಿದರು. ಪೊಲೀಸರು 70ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದರು.

ಮಧ್ಯಾಹ್ನ ಮತ್ತೆ ನೂರಾರು ಸಂಖ್ಯೆಯಲ್ಲಿ ಧಾವಿಸಿದ ಪ್ರತಿಭಟನಕಾರರು, ಕಾಮಗಾರಿ ಪ್ರದೇಶಕ್ಕೆ, ಕಡಲತೀರದ ಕಡೆಯಿಂದ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ತಡೆದ ಕಾರಣ ಮಹಿಳೆಯರು ಸಮುದ್ರಕ್ಕಿಳಿದು ಘೋಷಣೆ ಕೂಗಿದರು.

ADVERTISEMENT

ಯೋಜನೆಯಡಿ ಬಂದರು ವಿಸ್ತರಣೆಯಾದರೆ, ಭವಿಷ್ಯದಲ್ಲಿ ಮೀನುಗಾರಿಕಾ ಬಂದರಿನ ಅಸ್ತಿತ್ವಕ್ಕೇ ಧಕ್ಕೆಯಾಗ
ಬಹುದು ಎಂದು ಪ್ರತಿಭಟನಕಾರರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.