ADVERTISEMENT

ಹೈಕೋರ್ಟ್‌ಗೆ ನಾಲ್ವರು ಹೆಚ್ಚುವರಿ ನ್ಯಾಯಮೂರ್ತಿಗಳು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 20:48 IST
Last Updated 19 ಸೆಪ್ಟೆಂಬರ್ 2019, 20:48 IST

ನವದೆಹಲಿ: ಕರ್ನಾಟಕ ಹೈಕೋರ್ಟ್‌ಗೆ ನಾಲ್ವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಿಸಿ ಕೇಂದ್ರ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಎಂಟು ವಕೀಲರನ್ನು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಿಸಲು ಕೊಲಿಜಿಯಂ ಶಿಫಾರಸು ಮಾಡಿದ ಆರು ತಿಂಗಳ ಬಳಿಕ ಈ ನೇಮಕ ನಡೆದಿದೆ.

ಸಿಂಗಾಪುರಂ ರಾಘವಾಚಾರ್‌ ಕೃಷ್ಣ ಕುಮಾರ್‌, ಅಶೋಕ್‌ ಸುಭಾಶ್ಚಂದ್ರ ಕಿಂಗೈ, ಗೋವಿಂದರಾಜ್‌ ಸೂರಜ್‌ ಮತ್ತು ಸಚಿನ್‌ ಶಂಕರ್‌ ಮಂಗಡಂ ಅವರನ್ನು ಎರಡು ವರ್ಷ ಅವಧಿಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಿಸಲಾಗಿದೆ. ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಮಾರ್ಚ್‌ 25ರಂದು ಶಿಫಾರಸು ಮಾಡಿದ್ದ ಎಂಟು ವಕೀಲರ ಪಟ್ಟಿಯಲ್ಲಿ ಈ ನಾಲ್ವರ ಹೆಸರೂ ಸೇರಿತ್ತು.

ಕೊಲಿಜಿಯಂ ಕಳುಹಿಸಿದ್ದ ಶಿಫಾರಸು ಪಟ್ಟಿಯಲ್ಲಿ ಸವಣೂರು ವಿಶ್ವನಾಥ ಶೆಟ್ಟಿ, ಮರಲೂರು ಇಂದ್ರಕುಮಾರ್‌ ಅರುಣ್‌, ಮೊಹಮ್ಮದ್‌ ಗೌಸ್‌ ಶುಕೂರ್‌ ಕಮಾಲ್‌, ಎಂಗಲಗುಪ್ಪೆ ಸೀತಾರಾಮಯ್ಯ ಇಂದ್ರೇಶ್‌ ಅವರ ಹೆಸರೂ ಇತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.