ADVERTISEMENT

 ವಿಧಾನಸೌಧದಲ್ಲಿ ಬಿಜೆಪಿ ಶಾಸಕರ ಯೋಗಕ್ಷೇಮ ವಿಚಾರಿಸಿದ ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 5:47 IST
Last Updated 19 ಜುಲೈ 2019, 5:47 IST
   

ಬೆಂಗಳೂರು:ಸಂಸದೀಯ ವ್ಯವಹಾರಗಳ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರಸ್ಪೀಕರ್ ರಮೇಶ್‌ಕುಮಾರ್ ಅವರ ಸೂಚನೆ ಮೇರೆಗೆ ಶುಕ್ರವಾರ ಮುಂಜಾನೆ ವಿಧಾನಸೌಧಕ್ಕೆಭೇಟಿ ನೀಡಿ ಬಿಜೆಪಿ ಶಾಸಕರ ಯೋಗಕ್ಷೇಮ ವಿಚಾರಿಸಿದರು.

‘ನೀವು ಸಂಸದೀಯ ವ್ಯವಹಾರಗಳ ಸಚಿವರೂ ಆಗಿದ್ದೀರಿ. ಧರಣಿ ನಿರತ ಶಾಸಕರ ಯೋಗಕ್ಷೇಮ ನೋಡಿಕೊಳ್ಳಬೇಕು’ ಎಂದು ನನಗೆ ಹಾಗೂ ‘ಧರಣಿ ನಿರತ ಶಾಸಕರಿಗೆ ಅಗತ್ಯ ಭದ್ರತೆ ಒದಗಿಸುವಂತೆ ಗೃಹ ಸಚಿವ ಎಂ.ಬಿ.ಪಾಟೀಲ ಅವರಿಗೆ ಸ್ಪೀಕರ್ ರಮೇಶ್ ಕುಮಾರ್ ಸೂಚಿಸಿದ್ದರು. ಅದರಂತೆ ಮುಂಜಾನೆ ನಾನು ವಿಧಾನಸೌಧಕ್ಕೆ ಭೇಟಿ ನೀಡಿ ಶಾಸಕರ ಕುಶಲ ವಿಚಾರಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

‘ಧರಣಿ ನಿರತ ಶಾಸಕರಿಗೆ ನಿನ್ನೆ ರಾತ್ರಿ ಹೀಗಾಗಿ ಭೋಜನದ ವ್ಯವಸ್ಥೆ, ಮಲಗಲು ಬೆಡ್‌ಶೀಟ್, ತಲೆದಿಂಬು ಕೊಟ್ಟಿದ್ದೆವು. ಇವತ್ತು ಬೆಳಿಗ್ಗೆ ಅವರಿಗೆ ಯಾವುದೂ ತೊಂದರೆ ಆಗಬಾರದು ಅಂತ ವಿಚಾರಿಸೋಕೆ ಬಂದಿದ್ದೆ. ಅವರಿಗೆ ಉಪಾಹಾರದ ವ್ಯವಸ್ಥೆಯನ್ನೂ ಮಾಡಿದ್ದೆ. ನಾನೂ ಉಪಾಹಾರ ತಗೊಂಡು ಬಂದಿದ್ದೇನೆ. ಎಲ್ಲರೂ ಆರಾಮವಾಗಿ ಇದ್ದಾರೆ. ಅವರ ವೈದ್ಯರನ್ನೂ ಇಲ್ಲೇ ಇಟ್ಟಿದ್ವಿ. ಯಾರಿಗಾದರೂ ಆರೋಗ್ಯದ ಏರುಪೇರಾದ್ರೆ ವೈದ್ಯರು ಬೇಕಾಗುತ್ತಾರೆ ಅಂತ ವೈದ್ಯರ ತಂಡವನ್ನೇ ಇರಿಸಿದ್ದೇವೆ. ಎಲ್ಲರೂ ಆರೋಗ್ಯವಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.