ADVERTISEMENT

ಬೆಂಗಳೂರಿನ ಗೂಗಲ್‌ ಕಂಪನಿ ಉದ್ಯೋಗಿಗೆ ಕೋವಿಡ್–19 ಸೋಂಕು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 7:17 IST
Last Updated 13 ಮಾರ್ಚ್ 2020, 7:17 IST
   

ಬೆಂಗಳೂರು:ಗೂಗಲ್‌ನಬೆಂಗಳೂರುಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೋವಿಡ್‌–19 ಸೋಂಕು ತಗುಲಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ರೋಗದ ಲಕ್ಷಣಗಳು ಕಾಣಿಸುವ ಕೆಲ ಸಮಯದ ಮೊದಲು ಅವರು ಕಚೇರಿಯಲ್ಲಿ ಇದ್ದರು.ಬಿಳಿಕಅವರನ್ನುಪ್ರತ್ಯೇಕಗೊಳಿಸಲಾಗಿದ್ದು,ಅವರ ಹತ್ತಿರದಸಹೋದ್ಯೋಗಿಗಳಲ್ಲಿಪ್ರತ್ಯೇಕವಾಗಿರುವಂತೆಕೇಳಿಕೊಳ್ಳಲಾಗಿದೆ. ಸಿಬ್ಬಂದಿಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದುಗೂಗಲ್ಇಂಡಿಯಾ ಶುಕ್ರವಾರ ಹೇಳಿಕೆ ನೀಡಿದೆ.

ಸೌದಿಅರೇಬಿಯಾದಿಂದ ಕರ್ನಾಟಕಕ್ಕೆ ಬಂದಿದ್ದ 76 ವರ್ಷದವ್ಯಕ್ತಿಯೊಬ್ಬರುಕೋವಿಡ್–19ನಿಂದಮೃತಪಟ್ಟಿದ್ದರು.

ADVERTISEMENT

ಟೆಕ್‌ ದೈತ್ಯಕಂಪನಿಗಳಾದಮಿನ್‌ಟ್ರೀ ಮತ್ತುಡೆಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಇಬ್ಬರಿಗೆಕೋವಿಡ್–19 ಸೋಂಕು ತಗುಲಿರುವುದುದೃಢಪಟ್ಟಿದೆ.

ಬೆಂಗಳೂರುಕಚೇರಿಯಲ್ಲಿರುವ ಉದ್ಯೋಗಿಗಳಿಗೆಮನೆಯಿಂದ ಕೆಲಸ ಮಾಡುವಂತೆಗೂಗಲ್ ಸೂಚಿಸಿದ್ದುಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.ರೋಗ ಹರಡುವುದನ್ನು ತಡೆಯಲು ಸಂಸ್ಥೆಎಲ್ಲಾ ಅಗತ್ಯ ಕ್ರಮಗಳನ್ನುಕೈಗೊಂಡಿದೆ.

ಆರೋಗ್ಯಾಧಿಕಾರಿಗಳು ನೀಡಿದ್ದ ಸೂಚನೆಗಳನ್ನು ಪಾಲಿಸಲಾಗುತ್ತಿದೆ ಎಂದುಗೂಗಲ್ಇಂಡಿಯಾ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.