ADVERTISEMENT

‘ಸಂಘಟನೆ ಹೆಸರು ಬಹಿರಂಗಕ್ಕೆ ಒತ್ತಾಯ’

​ಪ್ರಜಾವಾಣಿ ವಾರ್ತೆ
Published 22 ಜೂನ್ 2018, 18:36 IST
Last Updated 22 ಜೂನ್ 2018, 18:36 IST
ಬಸವರಾಜ ಸೂಳಿಭಾವಿ
ಬಸವರಾಜ ಸೂಳಿಭಾವಿ   

ಗದಗ: ‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಿಂದಿನ ಸಂಘಟನೆ ಹೆಸರನ್ನು ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು’ ಎಂದು ಗೌರಿ, ಡಾ. ಕಲಬುರ್ಗಿ, ದಾಬೋಲ್ಕರ್‌, ಪನ್ಸಾರೆ ಹತ್ಯಾ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.

ಶುಕ್ರವಾರ ಇಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮುಖ್ಯಸ್ಥ ಬಸವರಾಜ ಸೂಳಿಭಾವಿ ಅವರು, ‘ಗೌರಿ ಹತ್ಯೆಗೆ ಸಂಬಂಧಿಸಿದಂತೆ ಶ್ರೀರಾಮಸೇನೆ, ಆರ್‌ಎಸ್‌ಎಸ್‌, ಸನಾತನ ಸಂಸ್ಥೆ, ಬಿಜೆಪಿ ಪಾತ್ರದ ಕುರಿತೂ ಎಸ್‌ಐಟಿ ಸಮಗ್ರ ತನಿಖೆ ನಡೆಸಬೇಕು. ಗೌರಿ, ಕಲಬುರ್ಗಿ, ದಾಬೋಲ್ಕರ್‌, ಪನ್ಸಾರೆ ಹತ್ಯೆಗಳಿಗೆ ಆಂತರಿಕವಾದ ಸಂಬಂಧ ಇದೆ. ಈ ಸಂಘಟನೆಗಳ ಮುಖ್ಯಸ್ಥರನ್ನು ತನಿಖೆಗೆ ಒಳಪಡಿಸಿದರೆ ಉಳಿದ ಹತ್ಯೆಗಳ ಹಿಂದಿನ ಶಕ್ತಿಯೂ ಬಯಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT