ADVERTISEMENT

ಜಿಸ್ಯಾಟ್–31 ಯಶಸ್ವಿ ಉಡಾವಣೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 19:15 IST
Last Updated 5 ಮಾರ್ಚ್ 2019, 19:15 IST
ಇಸ್ರೊ ಉಪಗ್ರಹ– ಸಾಂದರ್ಭಿಕ ಚಿತ್ರ
ಇಸ್ರೊ ಉಪಗ್ರಹ– ಸಾಂದರ್ಭಿಕ ಚಿತ್ರ   

ಬೆಂಗಳೂರು: ಇಸ್ರೊ ನಿರ್ಮಿತ ದೂರಸಂಪರ್ಕ ಉಪಗ್ರಹ ಜಿಸ್ಯಾಟ್‌–31 ಫ್ರೆಂಚ್‌ ಗಯಾನದಿಂದ ಮಂಗಳವಾರ ಮುಂಜಾನೆ ಉಡಾವಣೆ ಮಾಡಲಾಯಿತು.

ಏರಿಯಾನೆ 5 ವಿಎ–247 ಉಡ್ಡಯನ ವಾಹನದ ಮೂಲಕ ಮುಂಜಾನೆ 2.31ರ ವೇಳೆಗೆ ಸೌದಿ ಅರೇಬಿಯಾದ ಭೂಸ್ಥಿರ ಉಪಗ್ರಹ 1 ರ ಜೊತೆಗೆ ನಭಕ್ಕೆ ಹಾರಿ ಬಿಡಲಾಯಿತು. 42 ನಿಮಿಷಗಳ ಅವಧಿಯಲ್ಲಿ ಜಿಸ್ಯಾಟ್‌–31 ಏರಿಯಾನೆಯಿಂದ ಪ್ರತ್ಯೇಕಗೊಂಡಿತು.

2536 ಕೆ.ಜಿ ತೂಕದ ಉಪಗ್ರಹವು ಕ್ಯೂ–ಬ್ಯಾಂಡ್‌ ಟ್ರಾನ್ಸ್‌ಪಾಂಡರ್‌ ಅನ್ನು ಭೂಸ್ಥಿರ ಕಕ್ಷೆಯಲ್ಲಿ ನೆಲೆಗೊಳಿಸಿದೆ. ಈಗಾಗಲೇ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದೂರ ಸಂಪರ್ಕ ಉಪಗ್ರಹಗಳಿಗೆ ಪೂರಕವಾಗಿ ನಿರಂತರ ಸೇವೆ ನೀಡಲಿದೆ. ಭಾರತ ಮತ್ತು ನೆರೆಯ ದ್ವೀಪಗಳಿಗೆ ದೂರಸಂಪರ್ಕ ಸೇವೆ ನೀಡಲಿದೆ ಎಂದು ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್‌ ತಿಳಿಸಿದರು.

ADVERTISEMENT

ಡಿಟಿಎಚ್‌ ಟೆಲಿವಿಷನ್‌ ಸೇವೆಗಳು, ಎಟಿಎಂಗಳಿಗೆ ವಿಸ್ಯಾಟ್‌ ಸಂಪರ್ಕ, ಸ್ಟಾಕ್‌ ಎಕ್ಸ್‌ಚೇಂಜ್‌, ಡಿಎಸ್‌ಎನ್‌ಜಿ ಮತ್ತು ಇ–ಆಡಳಿತದ ಅನ್ವಯಗಳಿಗೆ ಇದು ಬಳಕೆಯಾಗಲಿದೆ ಎಂದೂ ಶಿವನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.