ಬೆಂಗಳೂರು: ‘ಮತ ಕಳ್ಳತನದ ಬಗ್ಗೆ ರಾಹುಲ್ ಗಾಂಧಿ ಅವರು ದಾಖಲೆ ಬಿಡುಗಡೆ ಮಾಡಿದ ಕೂಡಲೇ ಚುನಾವಣಾ ಆಯೋಗವು, ರಾಜ್ಯದ ಮತದಾರರ ಪಟ್ಟಿಯನ್ನು ತನ್ನ ಡೊಮೈನ್‌ನಿಂದ ತೆಗೆದುಹಾಕಿದೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳನ್ನು ಕಳವು ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಅವರು ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಬಿಜೆಪಿಯವರ ಕರಾಳ ಮುಖ ಈಗ ಬಯಲಾಗಿದೆ. ಚುನಾವಣಾ ಆಯೋಗವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂಬುದಕ್ಕೆ, ರಾಜ್ಯಗಳ ಮತದಾರರ ಪಟ್ಟಿಯನ್ನು ತೆಗೆದುಹಾಕಿರುವುದೇ ಸಾಕ್ಷಿ’ ಎಂದಿದ್ದಾರೆ.
‘ಒಬ್ಬರಿಗೆ ಒಂದು ಮತ ವ್ಯವಸ್ಥೆ ತರುವ ಮೂಲಕ ಬಾಬಾಸಾಹೇಬ ಅಂಬೇಡ್ಕರ್ ಅವರು ಎಲ್ಲರಿಗೂ ಆಡಳಿತದ ಗತಿ ನಿರ್ಧರಿಸುವ ಅಧಿಕಾರ ನೀಡಿದ್ದರು. ಈಗ ಬಿಜೆಪಿ ಒಬ್ಬರಿಗೆ ನಾಲ್ಕಾರು ಮತ ನೀಡುವ ಮೂಲಕ, ಜನಸಾಮಾನ್ಯರ ಈ ಅಧಿಕಾರವನ್ನು ಕಿತ್ತುಕೊಂಡಿದೆ’ ಎಂದು ಅವರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.