ADVERTISEMENT

‘ರಮೇಶ್‌ ಜಾರಕಿಹೊಳಿ ಮನೆ ಮುಂದೆ ಗೇಟ್‌ ಕೀಪರ್‌ ಆಗಿದ್ದ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 19:31 IST
Last Updated 12 ಡಿಸೆಂಬರ್ 2020, 19:31 IST
ಶಾಸಕ ಎಚ್.ಡಿ. ಕುಮಾರಸ್ವಾಮಿ
ಶಾಸಕ ಎಚ್.ಡಿ. ಕುಮಾರಸ್ವಾಮಿ    

ಚನ್ನಪಟ್ಟಣ: ‘ನನ್ನ ಬಗ್ಗೆ ಆತ ಏಕವಚನದಲ್ಲಿ ಮಾತನಾಡಿರುವುದು ಆತನ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದು ಸಿ.ಪಿ. ಯೋಗೇಶ್ವರ್ ಹೆಸರು ಹೇಳದೆ ಶಾಸಕ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾಳೆಯೇ ಮಂತ್ರಿಯಾಗಿ ಬಿಡುತ್ತೇನೆ ಎಂಬ ಹುಮ್ಮಸ್ಸಿನಲ್ಲಿ ಏಕವಚನ ಪ್ರಯೋಗ ಮಾಡುತ್ತಿದ್ದಾರೆ. ಅವರ ಹಾಗೆ ಕೆಳಮಟ್ಟಕ್ಕೆ ನಾನು ಇಳಿಯುವುದಿಲ್ಲ. ಅವರ ಹಿನ್ನೆಲೆ ಏನು ಎಂಬುದು ಗೊತ್ತಿದೆ. ಅವರ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ’ ಎಂದರು.

‘ಸಮ್ಮಿಶ್ರ ಸರ್ಕಾರ ಕೆಡವಲು ಸ್ಕೆಚ್ ಹಾಕಿದ್ದು ನಾನೇ ಎಂದು ಹೇಳಿಕೊಂಡಿದ್ದಾನೆ. ಇವನು ಮಹಾನ್ ನಾಯಕ ಅಲ್ಲವೇ, ಸರ್ಕಾರ ಬೀಳಿಸಲು ಹೊರಟಿದ್ದ ರಮೇಶ್ ಜಾರಕಿಹೊಳಿ ಮನೆ ಮುಂದೆ ಈತ ಗೇಟ್ ಕೀಪರ್ ಆಗಿದ್ದ. ಇವನನ್ನು ನೋಡಿ ಶಾಸಕರು ಬಂದಿದ್ದಾರಾ, ಈತ ಹಣ ಖರ್ಚು ಮಾಡಿ ಸರ್ಕಾರ ಬೀಳಿಸಿದ್ದಾನಾ, ಅದೇನು ಅವರಪ್ಪನ ಮನೆ ಹಣವೇ’ ಎಂದು ಕಿಡಿಕಾರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.