ಬೆಳಗಾವಿ: ಜಿಲ್ಲೆಯ ವಿವಿಧೆಡೆ ಭಾನುವಾರ ಮಧ್ಯಾಹ್ನ ಒಂದು ತಾಸು ಜೋರು ಮಳೆಯಾಯಿತು.
ನಗರದಲ್ಲಿ ಗುಡುಗು, ಸಿಡಿಲು ಹಾಗೂ ಆಲಿಕಲ್ಲು ಸಹಿತ ಬಿರುಸಾದ ಮಳೆ ಬಿದ್ದಿತು.ಸಂಪೂರ್ಣ ಕಾರ್ಮೋಡ ಕವಿದಿದ್ದರಿಂದ ಮಧ್ಯಾಹ್ನವೇ ಮುಸ್ಸಂಜೆಯ ವಾತಾವರಣ ನಿರ್ಮಾಣವಾಗಿತ್ತು. ಬಿಸಿಲಿನಿಂದ ಬಸವಳಿದಿದ್ದ ಇಳೆಗೆ ಮಳೆ ತಂಪನೆರೆಯಿತು. ಶಾಹೂನಗರ, ಶಿವಾಜಿನಗರದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಪರದಾಡಿದರು. ಕಾಲೇಜು ರಸ್ತೆಯ ಸರ್ದಾರ್ ಮೈದಾನದಲ್ಲಿ ನೀರು ಸಂಗ್ರಹವಾಗಿತ್ತು. ಅಜಂನಗರ ಮುಖ್ಯರಸ್ತೆಯಲ್ಲಿ ಚರಂಡಿ ಉಕ್ಕಿ ಹರಿದು ರಸ್ತೆಯಲ್ಲಿ ನೀರು ಸಂಗ್ರಹವಾಗಿತ್ತು.
ರಾಮದುರ್ಗ, ಬೈಲಹೊಂಗಲ, ಎಂ.ಕೆ. ಹುಬ್ಬಳ್ಳಿ, ಹಿರೇಬಾಗೇವಾಡಿ, ಗೋಕಾಕ, ಸವದತ್ತಿ, ಚಿಕ್ಕೋಡಿ, ಮೂಡಲಗಿ, ಘಟಪ್ರಭಾ ಹಾಗೂ ನಿಪ್ಪಾಣಿ ಪರಿಸರದಲ್ಲೂ ಮಳೆ ಬಿದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.