ADVERTISEMENT

ವೃದ್ಧಾಶ್ರಮದಲ್ಲಿ ಮೂಲಸೌಕರ್ಯ: ವಿವರ ಕೇಳಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 27 ಮೇ 2021, 21:52 IST
Last Updated 27 ಮೇ 2021, 21:52 IST

ಬೆಂಗಳೂರು: ಸ್ವಯಂಸೇವಾ ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳು ನಡೆಸುತ್ತಿರುವ ವೃದ್ಧಾಶ್ರಮಗಳಲ್ಲಿ ಕಲ್ಪಿಸಿರುವ ಮೂಲಸೌಕರ್ಯಗಳ ಬಗ್ಗೆ ವಿವರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಹಿರಿಯ ನಾಗರಿಕರ ಕಾಯ್ದೆ– 2007ರ ಸೆಕ್ಷನ್ 19ರ ಅಡಿಯಲ್ಲಿನ ನಿಬಂಧನೆಗಳ ಜಾರಿಗೆ ಕೈಗೊಂಡ ಕ್ರಮ ಬಗ್ಗೆ ವಿವರಿಸುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ತಿಳಿಸಿತು.

ಪ್ರತಿ ಜಿಲ್ಲೆಯಲ್ಲೂ ವೃದ್ಧಾಶ್ರಮಗಳ್ನು ತೆರೆಯಲು ಕಾಯ್ದೆಯಡಿ ಅವಕಾಶ ಇದ್ದರೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.‌

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.