ADVERTISEMENT

ಏ.15ರಿಂದ ಬಿಸಿಯೂಟ ಆರಂಭಿಸಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 18:44 IST
Last Updated 30 ಮಾರ್ಚ್ 2021, 18:44 IST
ಹೈಕೋರ್ಟ
ಹೈಕೋರ್ಟ   

ಬೆಂಗಳೂರು: 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಏಪ್ರಿಲ್ 15ರಿಂದ ಮಧ್ಯಾಹ್ನದ ಬಿಸಿಯೂಟ ಆರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಕೋವಿಡ್ ಎರಡನೇ ಅಲೆ ಗಮನದಲ್ಲಿಟ್ಟುಕೊಂಡು ಬಿಸಿಯೂಟ ಆರಂಭಿಸುತ್ತಿಲ್ಲ ಎಂಬ ಸರ್ಕಾರ ಉತ್ತರವನ್ನು ಪರಿಶೀಲಿಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ಹೊರಡಿಸಿತು.

‘ಶಾಲೆಗೆ ಹಾಜರಾಗುತ್ತಿರುವ ಮಕ್ಕಳಿಗೆ ಬಿಸಿಯೂಟ ನೀಡಬೇಕು’ ಎಂದು ನಿರ್ದೇಶನ ನೀಡಲು ಕೋರಿ ಎಂ. ರಾಧಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು.

ADVERTISEMENT

ಶಾಲೆಗಳ ಸದ್ಯದ ಸ್ಥಿತಿಗತಿ ವರದಿಯನ್ನು ಸರ್ಕಾರ ಮಂಗಳವಾರ ಸಲ್ಲಿಸಿತು. ‘ಆಹಾರ ಬೇಯಿಸಿ ಬಡಿಸುವುದರಿಂದ ಸೋಂಕು ಹರಡಬಹುದು ಎಂಬ ಕಾರಣಕ್ಕೆ ಬಿಸಿಯೂಟ ಆರಂಭಿಸಿಲ್ಲ. ಏಪ್ರಿಲ್ 10 ರಿಂದ ಜೂನ್ 10ರವರೆಗಿನ 47 ದಿನಗಳ ಕಾಲದ ಆಹಾರ ಭತ್ಯೆ ನೀಡಲು ಆರ್ಥಿಕ ನೆರವು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ವರದಿಯಲ್ಲಿ ತಿಳಿಸಿದೆ.

‘ಶಾಲೆಗಳನ್ನು ತೆರೆದಿರುವ ಸಂದರ್ಭದಲ್ಲಿ ಊಟದ ಭತ್ಯೆ ನೀಡಲು ಆಗುವುದಿಲ್ಲ. ಏಪ್ರಿಲ್ 15ರಿಂದ ಬಿಸಿಯೂಟ ಆರಂಭಿಸುವ ನಿರ್ಧಾರ ಕೈಗೊಂಡು ಏ.8ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ಪೀಠ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.