ADVERTISEMENT

ಹೈಕೋರ್ಟ್ ರಜೆ: ಕೊಂಚ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 19:59 IST
Last Updated 24 ಮಾರ್ಚ್ 2020, 19:59 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಬೆಂಗಳೂರು ಮತ್ತು ಕಲಬುರ್ಗಿ ಹೈಕೋರ್ಟ್ ವಿಶೇಷ ನ್ಯಾಯಪೀಠಗಳು ಇದೇ 26 ಮತ್ತು 31ರಂದು ಕಲಾಪ ನಡೆಸಲಿವೆ.

ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ಮಂಗಳವಾರ ಮತ್ತೊಂದು ಅಧಿಸೂಚನೆ ಹೊರಡಿಸಿದ್ದಾರೆ.

ಇದೇ 26ರಂದು ಮತ್ತು 31ರಂದು ಬೆಂಗಳೂರು ಪ್ರಧಾನ ಪೀಠ ಮತ್ತು ಕಲಬುರ್ಗಿಯಲ್ಲಿ ಒಂದು ವಿಭಾಗೀಯ ಮತ್ತು ಎರಡು ಏಕಸದಸ್ಯ ವಿಶೇಷ ನ್ಯಾಯಪೀಠಗಳು ಬೆಳಗ್ಗೆ 11ರಿಂದ ಮಧ್ಯಾಹ್ನ 12.30ರವರೆಗೆ ಕಲಾಪ ನಡೆಸಲಿವೆ.

ADVERTISEMENT

ಈ ಸಮಯದಲ್ಲಿ ತುರ್ತು ಪ್ರಕರಣಗಳ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಂತೆಯೇ ಇದೇ 31ರಂದು ಧಾರವಾಡದಲ್ಲಿ ವಿಚಾರಣೆಗೆ ನಿಗದಿಯಾಗಿರುವ ತುರ್ತು ಪ್ರಕರಣಗಳನ್ನು ಬೆಂಗಳೂರು
ಪ್ರಧಾನ ಪೀಠದಲ್ಲಿ ವಿಚಾರಣೆ ನಡೆಸಲಾಗುತ್ತದೆ. ವಕೀಲರು ಧಾರವಾಡದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿ ವಾದ ಮಂಡಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.