ADVERTISEMENT

ನೆಲಬಾಡಿಗೆ ಅಧಿಸೂಚನೆ ರದ್ದುಪಡಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 23:00 IST
Last Updated 5 ಜೂನ್ 2025, 23:00 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ಸ್ಥಿರಾಸ್ತಿ ಸ್ವತ್ತುಗಳ ನೋಂದಣಿ ವೇಳೆ, ಮಾರುಕಟ್ಟೆ ದರಕ್ಕೆ ಜೋಡಣೆ ಮಾಡಿ ‘ನೆಲಬಾಡಿಗೆ ಮತ್ತು ಇತರೆ ಶುಲ್ಕಗಳು’ ಎಂಬ ಹೆಸರಿನಲ್ಲಿ ನೆಲಬಾಡಿಗೆ ಸಂಗ್ರಹಕ್ಕೆ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಬೆಂಗಳೂರಿನ ಕೊಡಿಗೇಹಳ್ಳಿಯ ‘ಮೆಸರ್ಸ್‌ ಸಪ್ತಗಿರಿ ಶೆಲ್ಟರ್ಸ್‌’ ಪಾಲುದಾರ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಇತರೆ 500ಕ್ಕೂ ಹೆಚ್ಚು ರಿಟ್‌ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಆರ್‌.ದೇವದಾಸ್ ಅವರಿದ್ದ ಏಸಕದಸಸ್ಯ ನ್ಯಾಯಪೀಠ (ಧಾರವಾಡ) ಗುರುವಾರ ಪ್ರಕಟಿಸಿದೆ.

ADVERTISEMENT

ಹೊಸ ಕಟ್ಟಡಗಳಿಗೆ ಪರವಾನಗಿ ನೀಡುವಾಗ ಮತ್ತು ಕಟ್ಟಡದ ನಕ್ಷೆ ಮಂಜೂರು ಮಾಡುವಾಗ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ–1961ರ ಅನ್ವಯ, ಉತ್ತಮತೆ ಹಾಗೂ ನಿವೇಶನ ಶುಲ್ಕಕ್ಕೆ ಅನ್ವಯವಾಗುವಂತೆ ನೆಲಬಾಡಿಗೆಯನ್ನು ಕಡ್ಡಾಯವಾಗಿ ಪಾವತಿಸಿಕೊಳ್ಳಲು ಈ ಅಧಿಸೂಚನೆ ಹೊರಡಿಸಲಾಗಿತ್ತು. 80ಕ್ಕೂ ಹೆಚ್ಚು ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಎಸ್‌.ಸಮ್ಮಿತ್ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.