ADVERTISEMENT

ವೇಮಗಲ್ ಬಳಿ ಹೈಟೆಕ್ ಕೈಗಾರಿಕಾ ಪಾರ್ಕ್‌

₹10 ಸಾವಿರ ಕೋಟಿ ಹೂಡಿಕೆಗೆ ಜಪಾನಿನ ಮಾರುಬೇನಿ ಕಾರ್ಪೊರೇಷನ್‌ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 21:12 IST
Last Updated 18 ಜುಲೈ 2023, 21:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋಲಾರ ಜಿಲ್ಲೆ ವೇಮಗಲ್‌ ಸಮೀಪದ ಬಾವನಹಳ್ಳಿಯ 720 ಎಕರೆ ಪ್ರದೇಶದಲ್ಲಿ ಹೈಟೆಕ್‌ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿ ಸಲು ಜಪಾನಿನ ಮಾರುಬೇನಿ ಕಾರ್ಪೊರೇಷನ್‌ ಆಸಕ್ತಿ ತೋರಿದೆ.

ಮಾರುಬೇನಿ ಕಾರ್ಪೊರೇಷನ್‌ ಉಪ ಪ್ರಧಾನ ವ್ಯವಸ್ಥಾಪಕ ಶಿರೋಜೋನೊ ಕಾಜೌಕಿ, ಮಾರುಬೇನಿ ಇಂಡಿಯಾ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕ ತಕಾಯಿಕಾ ಯೋಶಿದಾ ನೇತೃತ್ವದ ನಿಯೋಗವು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರನ್ನು ಮಂಗಳವಾರ ಭೇಟಿ ಮಾಡಿ ಚರ್ಚೆ ನಡೆಸಿತು. 

‘ಮಾರುಬೇನಿ ಕಾರ್ಪೊರೇಷನ್‌ ಪ್ರಸ್ತುತಪಡಿಸಿರುವ ಪ್ರಸ್ತಾವನೆ ಆಕರ್ಷಕವಾಗಿದೆ. ಇದನ್ನು ವಿವರವಾಗಿ ಅಧ್ಯಯನ ಮಾಡಿದ ಬಳಿಕ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಸಚಿವ ಪಾಟೀಲ ಹೇಳಿದರು.

ADVERTISEMENT

‘ಉದ್ದೇಶಿತ ಹೈಟೆಕ್‌ ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೆ ನೇರವಾಗಿ ₹2,800 ಕೋಟಿ  ಹೂಡಿಕೆ ಮಾಡಲಾಗುವುದು. ನಂತರ ಅಲ್ಲಿನ ಕೈಗಾರಿಕಾ ನಿವೇಶನಗಳನ್ನು ಆಸಕ್ತ ಉದ್ದಿಮೆಗಳಿಗೆ ಹಂಚಲಾಗುವುದು. ಆ ಹಂತದಲ್ಲಿ ನೇರ ವಿದೇಶಿ ಹೂಡಿಕೆ ಮೂಲಕ ಇನ್ನೂ ₹8,000 ಕೋಟಿ ಹರಿದು ಬರಲಿದೆ. ಜತೆಗೆ ಇಲ್ಲಿ 40 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಇದರಿಂದ ಒಟ್ಟಾರೆಯಾಗಿ ಕರ್ನಾಟಕದ ಆರ್ಥಿಕತೆಗೆ ವರ್ಷಕ್ಕೆ ಎರಡು ಬಿಲಿಯನ್‌ ಡಾಲರ್ ಸೇರ್ಪಡೆಯಾಗಲಿದೆ’ ಎಂದು ನಿಯೋಗ ವಿವರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.