ADVERTISEMENT

ನಾನು ಬಿಜೆಪಿ ಏಜೆಂಟ್ ಅಲ್ಲ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 17:43 IST
Last Updated 19 ಅಕ್ಟೋಬರ್ 2021, 17:43 IST
ಸಿಂದಗಿ ತಾಲ್ಲೂಕು ಯಂಕಂಚಿ ಗ್ರಾಮದಲ್ಲಿ ಮಂಗಳವಾರ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮತಯಾಚಿಸಿ ಮಾತನಾಡಿದರು. ಮಲ್ಲಿಕಾರ್ಜುನ ಯಂಡಿಗೇರಿ, ಗುರುಲಿಂಗಪ್ಪಗೌಡ ಪಾಟೀಲ, ಎನ್.ಎಂ.ನಬಿ ಇದ್ದಾರೆ.
ಸಿಂದಗಿ ತಾಲ್ಲೂಕು ಯಂಕಂಚಿ ಗ್ರಾಮದಲ್ಲಿ ಮಂಗಳವಾರ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮತಯಾಚಿಸಿ ಮಾತನಾಡಿದರು. ಮಲ್ಲಿಕಾರ್ಜುನ ಯಂಡಿಗೇರಿ, ಗುರುಲಿಂಗಪ್ಪಗೌಡ ಪಾಟೀಲ, ಎನ್.ಎಂ.ನಬಿ ಇದ್ದಾರೆ.   

ವಿಜಯಪುರ: ‘ಮತಕ್ಷೇತ್ರದ ಜೆಡಿಎಸ್‌‌ನ ಒಂಬತ್ತು ಪ್ರಮುಖರ ಅಭಿಪ್ರಾಯದ ಮೇರೆಗೆ ಮುಸ್ಲಿಂ ಮಹಿಳೆಯನ್ನು ವಿಧಾನಸೌಧದಲ್ಲಿ ಕೂರಿಸಲು ಮುಂದಾದರೆ ನನ್ನನ್ನು ಬಿಜೆಪಿ ಏಜೆಂಟ್‌ ಎಂದು ಕಾಂಗ್ರೆಸ್ ಪಕ್ಷದವರು ಮಾಡುತ್ತಿರುವ ಆರೋಪ ಸರಿಯಲ್ಲ. ಬದುಕಿನ ಕೊನೆ ಘಟ್ಟದಲ್ಲಿರುವ ನಾನು ಅಂಥ ಪಾಪದ ಕೆಲಸ ಮಾಡುವುದಿಲ್ಲ’ ಎಂದು ಜೆಡಿಎಸ್ ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.

ಸಿಂದಗಿ ತಾಲ್ಲೂಕಿನ ಯಂಕಂಚಿ ಗ್ರಾಮದಲ್ಲಿ ಮಂಗಳವಾರ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಮತಯಾಚಿಸಿ ಮಾತನಾಡಿ, ‘ನಾವು ಸೋಲಿಗಾಗಿ ಚುನಾವಣೆಯಲ್ಲಿ ಸ್ಫರ್ಧೆ ಮಾಡ್ತೀವಾ’ ಎಂದು ವಿರೋಧಿಗಳಿಗೆ ಪ್ರಶ್ನಿಸಿದರು.

‘ಇಂಥ ಇಳಿ ವಯಸ್ಸಿನಲ್ಲೂ ಕಳೆದ ಐದು ದಿನಗಳಿಂದ ಚುನಾವಣಾ ಪ್ರಚಾರ ನಡೆಸಿದ್ದು ನನ್ನ ಸತ್ವ ಪರೀಕ್ಷೆಯಾಗಿದೆ. ನಿಮ್ಮ ಮನೆ ಬಾಗಿಲಿಗೆ 30 ವರ್ಷಗಳ ನಂತರ ಬಂದಿರುವೆ. ನನ್ನ ಬೆಂಬಲದಿಂದ ಬೆಳೆದ ಮನುಷ್ಯ ದಿವಂಗತ ಎಂ.ಸಿ.ಮನಗೂಳಿ, ಅವರ ಪುತ್ರನಿಗೆ ಕಾಂಗ್ರೆಸ್‌ಗೆ ಹೋಗಬೇಡ ಎಂದು ತಿಳಿಸಿದ 3-4 ಗಂಟೆಗಳಲ್ಲಿ ಆ ಪಕ್ಷಕ್ಕೆ ಸೇರಿಕೊಂಡಿರುವುದು ಆಘಾತ ಉಂಟುಮಾಡಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.