ADVERTISEMENT

ಹಂಪನಾ, ಜನಾರ್ದನಗೆ ರಾಷ್ಟ್ರಪತಿ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 1:03 IST
Last Updated 16 ಆಗಸ್ಟ್ 2019, 1:03 IST
ಡಾ.ಜನಾರ್ದನ ಹೆಗಡೆ ಹಾಗೂ ಹಂಪ ನಾಗರಾಜಯ್ಯ
ಡಾ.ಜನಾರ್ದನ ಹೆಗಡೆ ಹಾಗೂ ಹಂಪ ನಾಗರಾಜಯ್ಯ   

ನವದೆಹಲಿ: ಶಾಸ್ತ್ರೀಯ ಭಾಷೆಗಳ ಪ್ರಗತಿಗಾಗಿ ಸಲ್ಲಿಸಿದ ಗಣನೀಯ ಸೇವೆಗಾಗಿ ಸಂಸ್ಕೃತ ವಿದ್ವಾಂಸ ಜನಾರ್ದನ ಹೆಗಡೆ ಮತ್ತು ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ರಾಷ್ಟ್ರಪತಿಗಳ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಅಲ್ಲದೆ, ಶಾಸ್ತ್ರೀಯ ಭಾಷೆ ಕನ್ನಡದ ಪ್ರಗತಿಗಾಗಿ ನೀಡಿದ ಕೊಡುಗೆಗಾಗಿ ಜಿ.ಬಿ.ಹರೀಶ, ಎಸ್‌.ಕಾರ್ತೀಕ್‌ ಮತ್ತು ಡಾ.ಎಂ.ಭೈರಪ್ಪ ಅವರಿಗೆ ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್‌ ಪುರಸ್ಕಾರ ಲಭಿಸಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಪ್ರಶಸ್ತಿಗಳನ್ನು ಸ್ಥಾಪಿಸಿದೆ. ಪ್ರತಿ ವರ್ಷಸ್ವಾತಂತ್ರ್ಯೋತ್ಸವ ದಿನದ ಸಂದರ್ಭದಲ್ಲಿ ಕನ್ನಡ, ಸಂಸ್ಕೃತ, ತೆಲುಗು ಸೇರಿದಂತೆ ಒಟ್ಟು ಒಂಬತ್ತು ಭಾಷೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದವರ ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.