ADVERTISEMENT

ರಾಜೀನಾಮೆ ನೀಡಲ್ಲ; ಬದಲಿಗೆ ಜುಲೈ 10ರೊಳಗೆ ಸಚಿವನಾಗುವೆ: ಶಾಸಕ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 10:05 IST
Last Updated 1 ಜುಲೈ 2019, 10:05 IST
   

ಬೆಂಗಳೂರು: 'ನಾನು ರಾಜೀನಾಮೆ ಕೊಡೊದಿಲ್ಲ. ಅಂತಹ ಪ್ರಸಂಗ ನನಗೆ ಬಂದಿಲ್ಲ. ಇದೇ 10ರೊಳಗೆ ನಾನು ಮೈತ್ರಿ ಸರ್ಕಾರದಲ್ಲಿ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ' ಎಂದು ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ತಿಳಿಸಿದರು.

ಶಾಸಕ ಆನಂದ ಸಿಂಗ್ ರಾಜೀನಾಮೆಗೆ ಸಂಬಂಧಿಸಿದಂತೆ ಈ ಕುರಿತು'ಪ್ರಜಾವಾಣಿ' ಪ್ರತಿಕ್ರಿಯಿಸಿದರು.

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಆರೋಪಿಯಾಗಿರುವ ಅವರ ಸೋಮವಾರ ಜನಪ್ರತಿನಿಧಿಗಳ ಕೋರ್ಟ್ ಗೆ ಹಾಜರಾದರು.

ADVERTISEMENT

'ಆನಂದ ಸಿಂಗ್ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ' ಎಂದರು

ನಾಗೇಂದ್ರ ಅವರನ್ನು ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಬೆಳಗ್ಗೆ ಪೊಲೀಸ್ ವಶಕ್ಕೆ ಒಪ್ಪಿಸಿದರು. ಸದ್ಯ ವಿಚಾರಣೆಗೆ ಕೂಗಿಸುವುದನ್ನೇ ಕಾಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.