ADVERTISEMENT

ಚಿರತೆ ಸಾವಿಗೆ ಹಸಿವು ಕಾರಣ

ಮೃತ ಚಿರತೆಗಳ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 19:24 IST
Last Updated 14 ಅಕ್ಟೋಬರ್ 2018, 19:24 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಉಡುಪಿ: ಕಾರ್ಕಳ ತಾಲ್ಲೂಕಿನಲ್ಲಿ ವರ್ಷದ ಹಿಂದೆ ಸಾವನ್ನಪ್ಪಿದ್ದ ಎರಡು ಚಿರತೆಗಳು, ಹಸಿವಿನಿಂದ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ದೃಢಪಟ್ಟಿದೆ ಎಂದು ಕಾರ್ಕಳ ವಲಯ ಅರಣ್ಯಾಧಿಕಾರಿ ದಿನೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

2017ರ ಡಿಸೆಂಬರ್‌ನಲ್ಲಿ ಬೈಲೂರು ಸಮೀಪದ ಯರ್ಲಪಾಡಿ ಹಾಗೂ ಎಳ್ಳಾರೆ ಎಂಬಲ್ಲಿ 2 ಚಿರತೆಗಳು ಮೃತಪಟ್ಟಿದ್ದವು. ಕೇವಲ 2 ಕಿ.ಮೀ ಅಂತದಲ್ಲಿ ಎರಡು ಚಿರತೆಗಳು ಸತ್ತಿದ್ದರಿಂದ ಸಾವಿನ ಬಗ್ಗೆ ಸಂಶಯ ಮೂಡಿತ್ತು. ಯಾರಾದರೂ ವಿಷ ಹಾಕಿ ಚಿರತೆಗಳನ್ನು ಕೊಂದಿರಬಹುದು, ಇಲ್ಲವೇ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು.

ಹಾಗಾಗಿ, ಕಳೇಬರವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಪರೀಕ್ಷೆ ನಡೆಸಿದಾಗ ಚಿರತೆಗಳ ಹೊಟ್ಟೆ ಖಾಲಿಯಾಗಿರುವುದು ಕಂಡು ಬಂದಿತ್ತು. ಇದರ ಆಧಾರದ ಮೇಲೆ ಹಸಿವಿನಿಂದ ಮೃತಪಟ್ಟಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಆರ್‌ಎಫ್‌ಒ ಮಾಹಿತಿ ನೀಡಿದರು.‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.