ADVERTISEMENT

ಡಿ.2ರಿಂದ ಇಂದ್ರಧನುಷ್ ಲಸಿಕಾ ಅಭಿಯಾನ

ಪೋಲಿಯೊ ಸೇರಿದಂತೆ ವಿವಿಧ ರೋಗಗಳ ತಡೆಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 15:51 IST
Last Updated 1 ಡಿಸೆಂಬರ್ 2019, 15:51 IST
   

ಬೆಂಗಳೂರು: ಪೋಲಿಯೊ ಸೇರಿದಂತೆ ವಿವಿಧ ರೋಗಗಳ ತಡೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಿ.2ರಿಂದ ಮಾ.2ರವರೆಗೆ ರಾಜ್ಯದ 19 ಜಿಲ್ಲೆಗಳಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ.

2018ರ ವೇಳೆಗೆ ಎಲ್ಲ ಬಗೆಯ ಮಾರಣಾಂತಿಕ ಕಾಯಿಲೆಗಳಿಗೆ ಪೂರ್ಣಪ್ರಮಾಣದಲ್ಲಿ ಲಸಿಕೆ ಹಾಕುವ ಉದ್ದೇಶದಿಂದ ಮಿಷನ್ ಇಂದ್ರಧನುಷ್ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ, ನಿಗದಿತ ಗುರಿಯಲ್ಲಿ ಶೇ 90ರಷ್ಟು ಗುರಿ ಸಾಧನೆಯಾಗಿದೆ. ಇದೀಗ ‘ತೀವ್ರತರವಾದ ಮಿಷನ್ ಇಂದ್ರಧನುಷ್ 2.0' ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನದಡಿ2 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ಅಭಿಯಾನದ ಅವಧಿಯಲ್ಲಿ (ಗುರುವಾರ ಮತ್ತು ರಜಾದಿನ ಹೊರತುಪಡಿಸಿ) ಲಸಿಕೆ ಹಾಕಲಾಗುತ್ತದೆ.

ಬಾಲ ಕ್ಷಯ, ಪೋಲಿಯೊ,ಹೆಪಟೈಟಿಸ್ ಬಿ, ಗಂಟಲು ಮಾರಿ, ನಾಯಿ ಕೆಮ್ಮು, ಧನುರ್ವಾಯು,ಇನ್‍ಫ್ಲೂಂಜಾ (ಹಿಬ್), ರೋಟಾ ವೈರಸ್, ಅತಿಸಾರ, ಇರುಳು ಕುರುಡು, ದಡಾರ, ರುಬೆಲ್ಲ, ಗಂಟಲುಮಾರಿ, ನಾಯಿಕೆಮ್ಮು, ಮತ್ತು ಮಿದುಳು ಜ್ವರ ತಡೆಗೆ ಲಸಿಕೆಗಳು ಹಾಗೂ ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ.

ADVERTISEMENT

30ಸಾವಿರ ಮಕ್ಕಳಿಗೆ ಲಸಿಕೆ: 2 ವರ್ಷಕ್ಕಿಂತ ಕಡಿಮೆ ವಯಸ್ಸಿನ 30 ಸಾವಿರಕ್ಕೂ ಹೆಚ್ಚು ಮಕ್ಕಳು ಹಾಗೂ 2,500 ಗರ್ಭಿಣಿಯರಿಗೆ ಲಸಿಕೆ ಹಾಕಿಸುವ ಗುರಿಯನ್ನು ಇಲಾಖೆ ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.