ADVERTISEMENT

ಪ್ರವಾಹ: ಇನ್ಫೊಸಿಸ್‌ನಿಂದ ಸೂರು ಕಲ್ಪಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 16:31 IST
Last Updated 30 ಆಗಸ್ಟ್ 2019, 16:31 IST
ಇನ್ಫೊಸಿಸ್‌ ಪ್ರತಿಷ್ಠಾನದ ಅಧ‌್ಯಕ್ಷೆ ಸುಧಾಮೂರ್ತಿ ಅವರು ಶುಕ್ರವಾರ ನರಗುಂದ ತಾಲ್ಲೂಕಿನ ಪ್ರವಾಹ ಪೀಡಿತ ಕೊಣ್ಣೂರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು
ಇನ್ಫೊಸಿಸ್‌ ಪ್ರತಿಷ್ಠಾನದ ಅಧ‌್ಯಕ್ಷೆ ಸುಧಾಮೂರ್ತಿ ಅವರು ಶುಕ್ರವಾರ ನರಗುಂದ ತಾಲ್ಲೂಕಿನ ಪ್ರವಾಹ ಪೀಡಿತ ಕೊಣ್ಣೂರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು   

ಗದಗ: ‘ಸರ್ಕಾರ ಜಮೀನು ಕೊಟ್ಟರೆ ಮತ್ತು ಸಂತ್ರಸ್ತರು ಸ್ಥಳಾಂತರಗೊಳ್ಳಲು ಸಿದ್ಧರಿದ್ದರೆ ರಾಜ್ಯದಾದ್ಯಂತ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ₹20 ಕೋಟಿ ವೆಚ್ಛದಲ್ಲಿ ಒಟ್ಟು 200 ಮನೆಗಳನ್ನು ಇನ್ಫೊಸಿಸ್‌ ಪ್ರತಿಷ್ಠಾನದಿಂದ ನಿರ್ಮಿಸಿಕೊಡುವ ಯೋಜನೆ ಇದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹೇಳಿದರು.

ಮಲಪ್ರಭಾ ಪ್ರವಾಹದಿಂದ ಹಾನಿಗೊಳಗಾಗಿರುವ ನರಗುಂದ ತಾಲ್ಲೂಕಿನ ಕೊಣ್ಣೂರು ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ಸಂತ್ರಸ್ತರ ಅಹವಾಲು ಆಲಿಸಿದರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಸರ್ಕಾರ ಜಾಗ ಗುರುತಿಸಿ ನೀಡಬೇಕು ಜತೆಗೆ, ಅಲ್ಲಿ ಮನೆ ಕಟ್ಟಿದರೆ ಜನರು ವಾಸಿಸುವ ಭರವಸೆಯನ್ನೂ ನೀಡಬೇಕು. ಹಾಗಿದ್ದರೆ ಪ್ರತಿಷ್ಠಾನದಿಂದ ₹10 ಲಕ್ಷ ವೆಚ್ಛದಲ್ಲಿ ಒಂದು ಮನೆಯಂತೆ, ಮೊದಲ ಹಂತದಲ್ಲಿ 100 ಮನೆಗಳನ್ನು ನಿರ್ಮಿಸಲಾಗುವುದು. ನಂತರ ಎರಡನೆಯ ಹಂತದಲ್ಲಿ 100 ಮನೆಗಳನ್ನು ನಿರ್ಮಿಸಲಾಗುವುದು’ ಎಂದರು.

‘ಪ್ರವಾಹ ಸಂತ್ರಸ್ತರಿಗೆ ಇನ್ಫೊಸಿಸ್‌ನಿಂದ ಈಗಾಗಲೇ ₹5 ಕೋಟಿ ಮೊತ್ತದ ಪರಿಹಾರ ಸಾಮಗ್ರಿಗಳ ಕಿಟ್‌ ವಿತರಿಸಲಾಗಿದೆ. ಕೊಣ್ಣೂರಿನಲ್ಲಿ ಜಾನುವಾರುಗಳಿಗೆ 3 ಟ್ರಕ್‌ ಮೇವು ಪೂರೈಸಲಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.