ADVERTISEMENT

ವೈದ್ಯಕೀಯ ಕೋರ್ಸ್‌ ಪರೀಕ್ಷೆ ರದ್ದು ಅಸಾಧ್ಯ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 20:30 IST
Last Updated 19 ಫೆಬ್ರುವರಿ 2022, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ವಿಶ್ವವಿದ್ಯಾಲಯದ ನೀತಿಗಳನ್ನು ವಿದ್ಯಾರ್ಥಿಗಳು ನಿರ್ದೇಶಿಸಲು ಸಾಧ್ಯವಿಲ್ಲ’ ಎಂದು ಹೇಳಿರುವಹೈಕೋರ್ಟ್‌, ಪರೀಕ್ಷೆ ಮುಂದೂಡುವಂತೆ ಕೋರಿದ್ದ ವೈದ್ಯಕೀಯ ವಿದ್ಯಾರ್ಥಿಗಳ ಮನವಿಯನ್ನು ತಳ್ಳಿ ಹಾಕಿದೆ.

‘ಕೋವಿಡ್‌ ಸಮಯದಲ್ಲಿ ನಾವು ಮುಂಚೂಣಿ ಯೋಧರಾಗಿ ಕೆಲಸ ಮಾಡಿದ್ದೇವೆ. ನಮಗೆ ಅಧ್ಯಯನ ನಡೆಸಲು ಸಮಯಾವಕಾಶ ಸಿಕ್ಕಿಲ್ಲ. ಹೀಗಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಕಟಿಸಿರುವ ಪರೀಕ್ಷಾ ವೇಳಾಪಟ್ಟಿ ರದ್ದುಗೊಳಿಸಬೇಕು’ ಎಂದುಕೋರಿ ತರುಣ್ ಕೆ. ರೆಡ್ಡಿ ಸೇರಿದಂತೆ 39 ವೈದ್ಯ ವಿದ್ಯಾರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ.

‘ಪರೀಕ್ಷೆಗಳು ಹೇಗೆ, ಯಾವ ರೀತಿ ನಡೆಯಬೇಕು ಎಂಬುದನ್ನು ಆಯಾ ವಿಶ್ವವಿದ್ಯಾಲಯಗಳೇ ನಿರ್ಧರಿಸುತ್ತವೆ. ಶೈಕ್ಷಣಿಕ ನೀತಿಗಳು ಹೀಗೇ ಇರಬೇಕು ಎಂದು ವಿದ್ಯಾರ್ಥಿಗಳು ತಾಕೀತು ಮಾಡುವಂತಿಲ್ಲ. ಇಂಥ ಅರ್ಜಿಗಳನ್ನು ಶಾಸನಾತ್ಮಕ ಪರಿಧಿಯಲ್ಲಿ ನ್ಯಾಯಾಂಗದ ನಿಷ್ಕರ್ಷೆಗೆ ಒಳಪಡಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.